Connect with us

Hi, what are you looking for?

Diksoochi News

ರಾಷ್ಟ್ರೀಯ

ಯಶಸ್ವೀ ಕಾರ್ಯಾಚರಣೆ : ಸುರಂಗದಲ್ಲಿ ಸಿಲುಕ್ಕಿದ್ದ 41 ಕಾರ್ಮಿಕರು ಹೊರಕ್ಕೆ

0

ಉತ್ತರಕಾಂಡ : ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನ ಹೊರ ಕರೆತರುವ ಪ್ರಯತ್ನ ಯಶಸ್ವಿಯಾಗಿದೆ. 17 ದಿನಗಳ ಬಳಿಕ ಕಾರ್ಮಿಕರನ್ನು ಹೊರತರಲಾಗಿದೆ.

ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಕುಸಿದ ಭಾಗದ ಕೊನೆಯ 10-12 ಮೀಟರ್ ಉದ್ದದ ಅವಶೇಷಗಳನ್ನ ಇಲಿ-ರಂಧ್ರ ಗಣಿಗಾರಿಕೆ ತಜ್ಞರು ಹಸ್ತಚಾಲಿತವಾಗಿ ಕೊರೆದು ತೆರವುಗೊಳಿಸಿದರು.

ಉತ್ತರಖಾಂಡ್ 2, ಜಾರ್ಖಂಡ್ 15, ಬಿಹಾರ 8, ಅಸ್ಸಾಂ 5, ಉತ್ತರ ಪ್ರದೇಶ 5, ಪಶ್ಚಿಮ ಬಂಗಾಳದ 5 ಕಾರ್ಮಿಕರು ಒಳಗೆ ಸಿಲುಕಿದ್ದರು. 395 ಗಂಟೆಗಳ ಕಾರ್ಯಾಚರಣೆ ಮೂಲಕ ಹೊರ ತರಲಾಗಿದೆ. ಈ ವೇಳೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಉಪಸ್ಥಿತರಿದ್ದರು.

ಸಿಲ್ಕ್ಯಾರಾ ಸುರಂಗದ ಹೊರಗೆ ವೈದ್ಯರ ತಂಡದೊಂದಿಗೆ 41 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಕಾರ್ಮಿಕರ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!