ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರ 75ನೇ ಜನ್ಮ ದಿನೋತ್ಸವ ಅಂಗವಾಗಿ ಬ್ರಹ್ಮಾವರ ಹೇರೂರು ಬಳಿಯಲ್ಲಿರುವ ರುಡ್‌ಸೆಟ್‌ನ ಆಸರೆ ಸಂಘಟನೆಯಿಂದ ನಂಚಾರಿನಲ್ಲಿರುವ
ಕಾಮಧೇನು ಗೋ ಸೇವಾ ಟ್ರಸ್ಟ್‌ಗೆ ಗೋಗ್ರಾಸ ಸೇವೆ ನಡೆಯಿತು.
Advertisement. Scroll to continue reading.
ಹರಿಣಿ ಅಜಯ್ ರಾವ್, ಸಂಸ್ಥೆಯ ನಿರ್ದೇಶಕ ಲಕ್ಷ್ಮೀಶ ಎ ಜೆ , ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್, ಸಂತೋಷ್ ಶೆಟ್ಟಿ , ಶ್ರೀಕ್ಷೇತ್ರ ಧರ್ಮಸ್ಥಳದ ಸೇವಾ ಪ್ರತಿನಿಧಿ ಸುಲೇಖಾ, ಆಸರೆ ಸಂಘಟನೆಯ ಗೌರವಾಧ್ಯಕ್ಷ ರಾಜೇಶ್ ಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಸಿ ಅಮೀನ್, ನಿವೃತ್ತ ಕರ್ನಾಟಕ ಬ್ಯಾಂಕ್ ಅಧಿಕಾರಿ ಚಂದ್ರಶೇಖರ ನಾವುಡ, ಇನ್ನಿತರು ಉಪಸ್ಥಿತರಿದ್ದರು.
ಪ್ರಸ್ತುತ ತರಬೇತಿ ಪಡೆಯುತ್ತಿರುವ ತರಬೇತುದಾರರು ಸೇರಿದಂತೆ ಅನೇಕರು ಗೋಶಾಲೆಯಲ್ಲಿರುವ 200 ಅನಾಥ ಗೋವುಗಳಿಗೆ ಗೋಪೂಜೆ ನೆರವೇರಿಸಿದರು.
ಕಾಮಧೇನು ಗೋಶಾಲಾ ಮುಖ್ಯಸ್ಥ ರಾಜೇಂದ್ರ ಚಕ್ಕೆರ
ಗೋ ಗ್ರಾಸ ನೀಡಿದ ಸಂಸ್ಥೆಯ ಪಧಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
Advertisement. Scroll to continue reading.
In this article:brahmavara, cow, Diksoochi news, Dr. Veerendra Heggade, nancharu, ಗೋಗ್ರಾಸ
Click to comment