Connect with us

Hi, what are you looking for?

Diksoochi News

ಕ್ರೀಡೆ

IND vs AUS: ಟಿ 20 ಸರಣಿಯಿಂದ ಹೊರ ನಡೆದ ಆಸೀಸ್‌ನ ಆರು ಆಟಗಾರರು

1

ನವದೆಹಲಿ : ಭಾರತ ವಿರುದ್ದದ ಟಿ20 ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು 0-2 ಹಿನ್ನಡೆ ಅನುಭವಿಸಿರುವ ಅಸ್ಟ್ರೇಲಿಯಾ ತಂಡದ 6 ಆಟಗಾರರು ಪಂದ್ಯದಿಂದ ಹೊರಗುಳಿದಿದ್ದಾರೆ.

ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಆಡಂ ಝಾಂಪ ಸೇರಿದಂತೆ ಆರು ಮಂದಿ ಹಿರಿಯ ಆಟಗಾರರು ಟಿ20 ಸರಣಿಯ ಇನ್ನುಳಿದ ಮೂರು ಪಂದ್ಯಗಳಿಂದ ಔಟ್ ಆಗಿದ್ದಾರೆ. ಹೀಗಾಗಿ ಜಾಶ್‌ ಫಿಲಿಪ್‌ ಸೇರಿದಂತೆ ನಾಲ್ಕು ಮಂದಿ ಯುವ ಆಟಗಾರರು ಆಸ್ಟ್ರೇಲಿಯಾ ಟಿ20 ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ನವೆಂಬರ್‌ 19 ರಂದು ಅಂತ್ಯವಾಗಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್‌ ಆಗಿತ್ತು. ವಿಶ್ರಾಂತಿ ಬೇಕಾಗಿರುವ ಕಾರಣ ಹಿರಿಯ ಆಟಗಾರರು ಟಿ20 ಸರಣಿಯ ಇನ್ನುಳಿದ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಸ್ಟೀವನ್‌ ಸ್ಮಿತ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಆಡಂ ಝಾಂಪ, ಶೇನ್‌ ಎಬಾಟ್‌, ಜಾಶ್‌ ಇಂಗ್ಲಿಸ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ತವರಿಗೆ ಮರಳಿದ್ದಾರೆ.

Advertisement. Scroll to continue reading.

ಯಾರಿಗೆ ಸ್ಥಾನ ?:

ಹಿರಿಯ ಆಟಗಾರರ ಸ್ಥಾನಕ್ಕೆ ಜಾಶ್‌ ಫಿಲಿಪ್‌, ಬೆನ್‌ ಮೆಕ್‌ಡೆರ್ಮಟ್‌, ಬೆನ್ ದ್ವಾರ್ಶುಯಿಸ್ ಹಾಗೂ ಕ್ರಿಸ್‌ ಗ್ರೀನ್ ಲಗ್ಗೆ ಇಟ್ಟಿದ್ದಾರೆ. ಇದಕ್ಕೂ ಮೊದಲು ತನ್ವೀರ್‌ ಸಂಘ ಹಾಗೂ ಆರೋನ್ ಹಾರ್ಡಿ ಅವರನ್ನು ಆಸ್ಟ್ರೇಲಿಯಾ ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ಆರಂಭಿಕ ಎರಡು ಪಂದ್ಯಗಳಲ್ಲಿ ಸೋತು ಒತ್ತಡದಲ್ಲಿರುವ ಆಸ್ಟ್ರೇಲಿಯಾ ಇದೀಗ ಹಿರಿಯ ಆಟಗಾರರನ್ನು ಕಳೆದುಕೊಂಡು ಇನ್ನಷ್ಟು ಹಿನ್ನಡೆ ಅನುಭವಿಸಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!