Connect with us

Hi, what are you looking for?

Diksoochi News

ರಾಷ್ಟ್ರೀಯ

ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ

0

ತಿರುವನಂತಪುರಂ: 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಲು ತನ್ನ ಪ್ರೇಮಿಗೆ ಮಹಿಳೆಯೊಬ್ಬಳು ಅವಕಾಶ ಕೊಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಕೋರ್ಟ್ 40 ವರ್ಷ, 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿದೆ.

ಪೋಕ್ಸೋ (POCSO) (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳಲ್ಲಿ ಹೆಚ್ಚಾಗಿ ತಾಯಂದಿರು ಕಾನೂನು ಪರಿಣಾಮಗಳನ್ನು ಎದುರಿಸುವುದು ತೀರಾ ವಿರಳ. ಈ ಘಟನೆ 2018ರ ಮಾರ್ಚ್‌ನಿಂದ 2019ರ ಸೆಪ್ಟೆಂಬರ್ ನಡುವೆ ನಡೆದಿತ್ರು. ಈ ಸಮಯದಲ್ಲಿ ಮಹಿಳೆ ತನ್ನ ಮಾನಸಿಕ ಅಸ್ವಸ್ಥ ಪತಿಯಿಂದ ಬೇರ್ಪಟ್ಟು, ಪ್ರಕರಣದ ಪ್ರಮುಖ ಆರೋಪಿಯಾದ ಶಿಶುಪಾಲನ್ ಜೊತೆ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಳು. ಆ ಸಂದರ್ಭ ಮಹಿಳೆಯ 7 ವರ್ಷದ ಕಿರಿಯ ಮಗಳು ಸಹ ಅವರೊಂದಿಗೆ ವಾಸಿಸುತ್ತಿದ್ದಳು.

ಶಿಶುಪಾಲನ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಹಿನ್ನೆಲೆ ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿತ್ತು. ಇದರಲ್ಲಿ ಆಘಾತಕಾರಿ ವಿಚಾರವೆಂದರೆ 2018 ರಿಂದ 2019ರ ನಡುವೆ ಸಂತ್ರಸ್ತ ಬಾಲಕಿಯ ತಾಯಿಯ ಸಹಕಾರದಲ್ಲಿಯೇ ಶಿಶುಪಾಲನ್ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ.

Advertisement. Scroll to continue reading.

ಇಷ್ಟು ಮಾತ್ರವಲ್ಲದೇ ಆತ ಸಂತ್ರಸ್ತೆಯ 11 ವರ್ಷದ ಮಲ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲಿಯವರೆಗೂ ಬಾಲಕಿಯರಿಗೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಎಲ್ಲೂ ಹೇಳಿಕೊಳ್ಳದಂತೆ ಬೆದರಿಸಲಾಗಿತ್ತು. ಬಳಿಕ ಬಾಲಕಿಯರು ತಮ್ಮ ಅಜ್ಜಿಮನೆಗೆ ಪರಾರಿಯಾಗಿದ್ದು, ಅಲ್ಲಿ ನಡೆದೆಲ್ಲಾ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಘಟನೆಯನ್ನು ತಿಳಿದು ಗಾಬರಿಗೊಳಗಾದ ಅಜ್ಜಿ ಮಕ್ಕಳನ್ನು ಪಾಲನಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಕೌನ್ಸೆಲಿಂಗ್ ನಡೆಸಿದ ವೇಳೆ ಮಕ್ಕಳು ಘಟನೆಯನ್ನು ತಿಳಿಸಿದ್ದಾರೆ. ಮಹಿಳೆಯ ಮತ್ತೊಬ್ಬ ಪ್ರೇಮಿ ಕೂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದು ತಿಳಿದು ಬಂದಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ವಿಚಾರ ಬಹಿರಂಗವಾದ ಬಳಿಕ ಶಿಶುಪಾಲನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿನ್ನೆಲೆ ಅತ್ಯಾಚಾರಕ್ಕೆ ಸಹಕರಿಸಿದ ತಾಯಿಗೆ ಮಾತ್ರವೇ ಇದೀಗ 40 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಜ್ಯೋತಿಷ್ಯ

0 ದಿನಾಂಕ : ೨೨-೦೨-೨೪, ವಾರ: ಗುರುವಾರ, ನಕ್ಷತ್ರ : ಪುಷ್ಯ, ತಿಥಿ : ತ್ರಯೋದಶಿ ವಿವಾಹೇತರ ಸಂಬಂಧಗಳಿಂದ ಅಂತರ ಕಾಯ್ದುಕೊಳ್ಳಬೇಕು. ನೀವು ಸಂಬಂಧಿಕರನ್ನು ಹೆಚ್ಚು ನಂಬಬಾರದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ...

ರಾಜ್ಯ

0 ಬೆಂಗಳೂರು: ನಟ ಡಾಲಿ ಧನಂಜಯ್ ಕಾಂಗ್ರೆಸ್ ಪಕ್ಷ ಮೂಲಕ ರಾಜಕೀಯ ಪ್ರವೇಶಿಸುತ್ತಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗೆ ನಟ ಬ್ರೇಕ್ ಹಾಕಿದ್ದಾರೆ. ಈ...

ಕ್ರೀಡೆ

1 ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಲಾಗಿದೆ. ಈ ಬಗ್ಗೆ ಸ್ವತಃ...

ರಾಷ್ಟ್ರೀಯ

0 ಮುಂಬೈ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಯನ್ನು ರಸ್ತೆಯಲ್ಲೇ ಸಾಲಾಗಿ ಮಲಗಿಸಿ ಡ್ರಿಪ್ಸ್‌ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಒಂದು ವಾರದಿಂದ ʼಹರಿಣಂ ಸಪ್ತಾಹʼ...

ಕ್ರೀಡೆ

0 ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಎರಡೂ ತಂಡಗಳು ಈಗಾಗಲೇ ರಾಂಚಿಗೆ ಆಗಮಿಸಿದ್ದು, ಅಭ್ಯಾಸ ನಡೆಸುತ್ತಿವೆ. ಈ ಪಂದ್ಯ ಇಂಗ್ಲೆಂಡ್‌ಗೆ ಸರಣಿ ಉಳಿಸಿಕೊಳ್ಳಲು ಮಹತ್ವದ್ದಾಗಿದೆ. ಸರಣಿಯಲ್ಲಿ...

error: Content is protected !!