Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಚೀನಾದಲ್ಲಿ ವಿಚಿತ್ರ ಜ್ವರ; ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರ್ಕಾರ

1

ಬೆಂಗಳೂರು : ಕೊರೋನಾ ಎಂಬ ಮಹಾಮಾರಿ ಬಂದ ಮೇಲೆ ಆತಂಕ ಸಹಜವಾಗಿದೆ. ಹೊಸ ಹೊಸ ವೈರಸ್, ಸೋಂಕುಗಳ ಹೆಸರು ಕೇಳಿದರೇನೆ ಜನರು ಭಯಗೊಳ್ಳುತ್ತಾರೆ. ಅದರಲ್ಲೂ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರುತ್ತಿವೆ. ಹೀಗಿರುವಾಗ ಚೀನಾದಲ್ಲಿ ಸದ್ದಿಲ್ಲದೆ ವಿಚಿತ್ರ ಜ್ವರದ ಸೋಂಕು ಮಕ್ಕಳನ್ನು ಕಾಡುತ್ತಿದ್ದು, ದಿನಕ್ಕೆ ಸಾವಿರಾರು ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಭಾರತದಲ್ಲಿ ಎಲ್ಲಾ ಕಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಂಗಳೂರಿನಲ್ಲಿ ಸರ್ಕಾರ ಈಗಾಗಲೇ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ.

ಗಾಳಿಯಿಂದ ಹರಡುವ ಈ ತರಹದ ಕಾಯಿಲೆಗಳ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರಿಸ್ಥಿತಿಯ ಬಗ್ಗೆ ಹೆಚ್ಚು ಕಳವಳವನ್ನು ವ್ಯಕ್ತಪಡಿಸಿದ್ದು, ಅಲ್ಲಿನ ಮಕ್ಕಳಲ್ಲಿ ಕಂಡು ಬರುತ್ತಿರುವ ಉಸಿರಾಟದ ಅಸ್ವಸ್ಥತೆಗೆInfluenza, Mycoplasma pneumonia, SARS-CoV-2 ತರಹದ ಸೋಂಕು ಕಾರಣವಿರಬಹುದು ಎಂದು ಹೇಳಿದೆ.

Advertisement. Scroll to continue reading.

ಒಬ್ಬ ವ್ಯಕ್ತಿ ಕೆಮ್ಮುವುದರಿಂದ ಅಥವಾ ಸೀನುವುದರಿಂದ ಈ ತರಹದ ಜ್ವರ ಗಾಳಿಯಲ್ಲಿ ಹಲವು ಜನರಿಗೆ ಹರಡುತ್ತದೆ. ಐದರಿಂದ ಏಳು ದಿನಗಳ ಕಾಲ ಜ್ವರದ ಲಕ್ಷಣಗಳನ್ನು ಮಕ್ಕಳಲ್ಲಿ ತೋರಿಸುತ್ತಿದ್ದು, ಪೆÇೀಷಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

ಪ್ರಸ್ತುತ ಕರ್ನಾಟಕ ಸರ್ಕಾರ ಗರ್ಭಿಣಿ ಮಹಿಳೆಯರು ಹಾಗೂ ಪುಟ್ಟ ಕಂದಮ್ಮಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಯಾರು ದೀರ್ಘಕಾಲದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ ಮತ್ತು ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂತಹವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಸೃಷ್ಟಿಯಾಗುತ್ತದೆ. ಹಾಗಾಗಿ ಬಹಳ ಎಚ್ಚರದಿಂದ ಇರಬೇಕು ಎಂಬುದಾಗಿ ಸೂಚಿಸಿದೆ.

ಇನ್ಫ್ಲುಯೆನ್ಸ್ ತರಹದ ಉಸಿರಾಟದ ತೊಂದರೆ ಕಾಣಿಸುತ್ತಿರುವ ಮಕ್ಕಳಲ್ಲಿ ಕಂಡುಬರುತ್ತಿರುವ ರೋಗ ಲಕ್ಷಣಗಳು :
ಜ್ವರ
ಮೈ ಕೈ ನಡುಗುವುದು
ವಾಕರಿಕೆ
ಹೊಟ್ಟೆ ಹಸಿವು ಇಲ್ಲದಾಗುವುದು
ಆರೋಗ್ಯದ ಅಸ್ವಸ್ಥತೆ
ಮೈ ಕೈ ನೋವು
ಒಣ ಕೆಮ್ಮು
ಸೀನುವುದು

ಏನು ಮಾಡಬೇಕು :

Advertisement. Scroll to continue reading.

ಈ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ.
ಕೆಮ್ಮು ಅಥವಾ ಸೀನು ಬಂದಾಗ ಮೂಗು ಹಾಗೂ ಬಾಯಿಯನ್ನು ಕರ್ಚೀಫ್‍ನಿಂದ ಮುಚ್ಚಿಕೊಳ್ಳಿ.
ದಿನದಲ್ಲಿ ಆಗಾಗ ಸೋಪಿನಿಂದ ಕೈ ತೊಳೆದುಕೊಳ್ಳಿ.
ಕೈಗಳಿಂದ ಕಣ್ಣುಗಳು, ಮೂಗು ಹಾಗೂ ಬಾಯಿಯನ್ನು ಮುಟ್ಟಿಕೊಳ್ಳಬೇಡಿ.
ಹೆಚ್ಚು ಜನಜಂಗುಳಿ ಇರುವ ಪ್ರದೇಶಗಳಿಗೆ ಹೋಗಬೇಡಿ. ಒಂದು ವೇಳೆ ಹೋದರೆ ಮಾಸ್ಕ್ ಹಾಕಿಕೊಂಡು ಹೋಗಿ.
ಯಾರಿಗಾದರೂ ಜ್ವರ ಇದೆ ಎಂದು ಗೊತ್ತಾದರೆ ಅಂತಹವರಿಂದ ಸಾಧ್ಯವಾದಷ್ಟು ದೂರ ಇರಿ.
ಹೆಚ್ಚು ನೀರು ಕುಡಿಯಿರಿ.
ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಿ.
ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಮಾಡಿ, ದೈಹಿಕವಾಗಿ ಚುರುಕಾಗಿದ್ದು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಿ.
ಸಿಕ್ಕ ಸಿಕ್ಕ ಕಡೆ ಉಗಿಯಬೇಡಿ.
ಹೊರಗಡೆ ಹೋಗುವಾಗ ಚಪ್ಪಲಿ ಅಥವಾ ಶೂಸ್ ಧರಿಸಿ ಹೋಗಿ.
ಜ್ವರ ಹಾಗೂ ಉಸಿರಾಟದ ತೊಂದರೆ ಹೆಚ್ಚು ಕಂಡು ಬರುತ್ತಿರುವ ಪ್ರದೇಶಗಳಿಗೆ ಹೋಗಬೇಡಿ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!