Connect with us

Hi, what are you looking for?

Diksoochi News

ಕ್ರೀಡೆ

IND vs AUS T-20: ಪಾಕಿಸ್ತಾನ ವಿಶ್ವದಾಖಲೆ ಮುರಿದ ಭಾರತ

0

ರಾಯ್‌ಪುರ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಅಬ್ಬರಿಸಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ವಶಪಡಿಸಿಕೊಂಡಿದೆ. ಈ ಮೂಲಕ ವಿಶ್ವಕಪ್ ಫೈನಲ್ ಸೋಲಿನ ನೋವಿಗೆ ಸ್ವಲ್ಪ ಮುಲಾಮ್ ಹಚ್ಚಿದೆ.

ರಾಯ್‌ಪುರದಲ್ಲಿ ಶುಕ್ರವಾರ ನಡೆದಿದ್ದ ನಾಲ್ಕನೇ ಟಿ20ಯಲ್ಲಿ ಕಾಂಗರೂಗಳ ವಿರುದ್ಧ ಟೀಮ್‌ ಇಂಡಿಯಾ 20 ರನ್‌ಗಳಿಂದ ಗೆದ್ದು ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಭಾರತ, ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾರತ ತಂಡ ಇದುವರೆಗೆ 213 ಪಂದ್ಯಗಳನ್ನು ಆಡಿದ್ದು, 136 ಪಂದ್ಯಗಳನ್ನು ಗೆದ್ದಿದೆ.

ಇದುವರೆಗೂ ಈ ದಾಖಲೆ ಪಾಕಿಸ್ತಾನ ತಂಡದ ಹೆಸರಿನಲ್ಲಿತ್ತು. ಟಿ20 ಮಾದರಿಯಲ್ಲಿ ಪಾಕಿಸ್ತಾನ 226 ಪಂದ್ಯಗಳನ್ನು ಆಡಿದ್ದು, 135 ಪಂದ್ಯಗಳನ್ನು ಗೆದ್ದಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟಿ20 ಗೆದ್ದ ನಂತರ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಮತ್ತೊಂದೆಡೆ ಈ ಗೆಲುವಿನೊಂದಿಗೆ ಭಾರತ ತಂಡ ಟಿ20 ಸರಣಿಯನ್ನೂ ಗೆದ್ದುಕೊಂಡಿದೆ. 2019ರಲ್ಲಿ ಭಾರತ ತಂಡ ತವರಿನಲ್ಲಿ ಕೊನೆಯ ಬಾರಿ ಸರಣಿ ಟಿ20 ಸರಣಿ ಸೋತಿತ್ತು.

Advertisement. Scroll to continue reading.

ಈ ಟಿ20 ಸರಣಿಯವರೆಗೆ ತವರು ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಯಾವುದೇ ಟಿ20 ಪಂದ್ಯದಲ್ಲಿ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿ ಗೆದ್ದಿರಲಿಲ್ಲ. ಭಾರತ ಈ ಸರಣಿಯ ಎರಡನೇ ಹಾಗೂ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಗೆದ್ದಿದೆ. ಆದರೆ, ಮೊದಲನೇ ಪಂದು ಚೇಸಿಂಗ್‌ನಲ್ಲಿ ಗೆದ್ದಿತ್ತು. ನಂತರ ಮೂರನೇ ಪಂದ್ಯದಲ್ಲಿಯೂ ಮೊದಲು ಬ್ಯಾಟ್‌ ಮಾಡಿತ್ತಾದರೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಸ್ಪೋಟಕ ಬ್ಯಾಟಿಂಗ್‌ನಿಂದ ಸೋಲು ಅನುಭವಿಸಿತ್ತು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!