ಸುಳ್ಯ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಗೆ ಎರಡು ದಿನಗಳ ಜಾಮೀನು ಸಿಕ್ಕಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಇಬ್ರಾಹಿಂ ಶಾ ನಾವೂರುನನ್ನು 15ನೇ ಆರೋಪಿಯಾಗಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಸುಳ್ಯದಲ್ಲಿ ಈತನ ತಂಗಿಯ ಮದುವೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಈತ ಮೈಸೂರಿನ ಜೈಲಿನಲ್ಲಿದ್ದು ಜಾಮೀನು ಅವಧಿ ಮುಗಿದ ತಕ್ಷಣ ಮತ್ತೆ ಜೈಲು ಸೇರಬೇಕಿದೆ.
Advertisement. Scroll to continue reading.
2022 ಜುಲೈ 26ರಂದು ಬೆಳ್ಳಾರೆಯಲ್ಲಿ ತನ್ನ ಚಿಕನ್ ಶಾಪ್ ಎದುರೇ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ ಐಎ ಹಲವರನ್ನು ಬಂಧಿಸಿತ್ತು. ಇನ್ನೂ ಕೆಲವು ಆರೋಪಿಗಳಿಗಾಗಿ ಎನ್ ಐಎ ಬಲೆ ಬೀಸಿದೆ.
In this article:Bell are, crime case, Diksoochi news, NIA, Praveen Nettaru Murder, putturu, sullia, victims, ಜಾಮೀನು
Click to comment