ಉಡುಪಿ: ಸರ್ಕಾರದ ನಿರ್ದೇಶನದಂತೆ ಈಗಾಗಲೇ ಜಿಲ್ಲೆಯಲ್ಲಿ ೧೯೭ ಗ್ರಾಮ ಒನ್ ಕೇಂದ್ರಗಳು ಪ್ರಾರಂಭಗೊAಡು ಕಾರ್ಯನಿವಹಿಸುತ್ತಿದ್ದು, ಉಳಿದ ೧೯ ಪಂಚಾಯತ್ ವ್ಯಾಪ್ತಿಯಾದ ಕೊಕ್ಕರ್ಣೆ, ಹಾರಾಡಿ, ನಾಲ್ಕೂರು, ಆರೂರು, ಕೋಟತಟ್ಟು, ಶಿರೂರು, ಕಿರಿಮಂಜೇಶ್ವರ, ಕಟಪಾಡಿ, ನಿಟ್ಟೆ, ಕಾಂತಾವರ, ನಂದಳಿಕೆ, ಗಂಗೊಳ್ಳಿ, ಕೋಟೇಶ್ವರ, ಅಮಾಸೆಬೈಲು, ಯಡಮೊಗೆ, ಉದ್ಯಾವರ, ತೆಂಕನಿಡಿಯೂರು, ಕಡೆಕಾರು ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ೦೧ ಹಾಗೂ ಹಂದಾಡಿ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ೨ ಸೇರಿದಂತೆ ಒಟ್ಟು ೨೦ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತ ಹಾಗೂ ಅರ್ಹ ಸಾರ್ವಜನಿಕರಿಂದ ವೆಬ್‌ಸೈಟ್ https://kal-mys.gramaone.karnataka.gov.in/ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ ಗ್ರಾಮ ಒನ್ ಕೇಂದ್ರವನ್ನು ತೆರೆಯಲು ಹಾಕಿದ ಅರ್ಜಿಯನ್ನು ಹೊರತುಪಡಿಸಿ ಹೊಸ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Advertisement. Scroll to continue reading.