ದುಬೈ : ಏಷ್ಯಾಕಪ್ ಅಂಡರ್ 19 ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಡಿಸೆಂಬರ್ 8 ರಿಂದ ಪಂದ್ಯ ಆರಂಭಗೊಳ್ಳುತ್ತಿದೆ. ಈ ಬಾರಿ ದುಬೈ ಆತಿಥ್ಯವಹಿಸಿದೆ. ಡಿಸೆಂಬರ್ 10 ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ.
50 ಓವರ್ ಏಕದಿನ ಪಂದ್ಯದ ಏಷ್ಯಾಕಪ್ ಅಂಡರ್ 19 ಟೂರ್ನಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ಇದೀಗ 10ನೇ ಏಷ್ಯಾಕಪ್ ಅ-19 ಟ್ರೋಫಿ ತನ್ನದಾಗಿಸಿಕೊಳ್ಳಲು ತಯಾರಿ ನಡೆಸುತ್ತಿದೆ.
ಡಿಸೆಂಬರ್ 8ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಹೋರಾಟ ನಡೆಸಲಿದೆ. ಡಿಸೆಂಬರ್ 13ರ ವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಪ್ರತಿ ದಿನ ಎರಡೆರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ 15 ರಂದು 2 ಸೆಮಿಫೈನಲ್ ಪಂದ್ಯ ಆಯೋಜಿಸಲಾಗಿದ್ದು, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.
ಏಷ್ಯಾಕಪ್ ಅ-19 ಟೂರ್ನಿಯಲ್ಲಿ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಫ್ಘಾನಿಸ್ತಾನ ಹಾಗೂ ನೇಪಾಳ ತಂಡ ಕೂಡ ಎ ಗುಂಪಿನಲ್ಲಿದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಯುಎಇ ಹಾಗೂ ಜಪಾನ್ ಸ್ಥಾನ ಪಡೆದಿದೆ.
ವೇಳಾಪಟ್ಟಿ :
- ಡಿ.8, ಭಾರತ – ಆಫ್ಘಾನಿಸ್ತಾನ
- ಡಿ.8, ಪಾಕಿಸ್ತಾನ – ನೇಪಾಳ
- ಡಿ.9, ಬಾಂಗ್ಲಾದೇಶ – ಯುಎಇ
- ಡಿ.9, ಶ್ರೀಲಂಕಾ – ಜಪಾನ್
- ಡಿ.10, ಭಾರತ – ಪಾಕಿಸ್ತಾನ
- ಡಿ.10 ಆಫ್ಘಾನಿಸ್ತಾನ – ನೇಪಾಳ
- ಡಿ.11, ಶ್ರೀಲಂಕಾ – ಯುಎಇ
- ಡಿ.11, ಬಾಂಗ್ಲಾದೇಶ – ಜಪಾನ್
- ಡಿ.12, ಪಾಕಿಸ್ತಾನ – ಆಫ್ಘಾನಿಸ್ತಾನ
- ಡಿ.12, ಭಾರತ – ನೇಪಾಳ
- ಡಿ.13, ಬಾಂಗ್ಲಾದೇಶ – ಶ್ರೀಲಂಕಾ
- ಡಿ.13, ಯುಎಇ – ಜಪಾನ್
ಸೆಮಿಫೈನಲ್
ಡಿ.15, ಸೆಮಿಫೈನಲ್ 1
ಡಿ.15, ಸೆಮಿಫೈನಲ್ 2
ಫೈನಲ್
ಡಿ.17, ಫೈನಲ್
ಭಾರತ ತಂಡ :
ಉದಯ್ ಸಹರಣ್(ನಾಯಕ), ಸೌಮಿ ಕುಮಾರ್ ಪಾಂಡೆ(ಉಪ ನಾಯಕ), ಅರ್ಶಿನಿ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಧನುಶ್ ಗೌಡಾ, ಆವಿನಾಶ್ ರಾವ್(ವಿಕೆಟ್ ಕೀಪರ್), ಎಂ ಅಭಿಶೇಕ್, ಇನ್ನೇಶ್ ಮಹಾಜನ್, ಆರ್ಧ್ಯಾ ಶುಕ್ಲಾ, ರಾಜ್ ಲಿಂಬಾನಿ, ನಮನ್