ಫಿಲಿಪೈನ್ಸ್ನ ಮಿಂಡನಾವೊದಲ್ಲಿ ಶನಿವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (EMSC) ಮಾಹಿತಿ ನೀಡಿದೆ.
ಭೂಕಂಪವು 63 ಕಿ.ಮೀ (39 ಮೈಲಿ) ಆಳದಲ್ಲಿತ್ತು ಎಂದು ಅದು ತಿಳಿಸಿದೆ.
ಇನ್ನು ಭೂಕಂಪದ ನಂತರ ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆ ಸುನಾಮಿ ಎಚ್ಚರಿಕೆ ನೀಡಿದೆ.
Advertisement. Scroll to continue reading.
ಕಳೆದ ತಿಂಗಳ ಆರಂಭದಲ್ಲಿ ದಕ್ಷಿಣ ಫಿಲಿಪೈನ್ಸ್ ನಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿ ಎಂಟು ಜನರು ಸಾವನ್ನಪ್ಪಿದ್ದರು.
ಸಾರಂಗನಿ, ದಕ್ಷಿಣ ಕೊಟಾಬಾಟೊ ಮತ್ತು ದಾವಾವೊ ಆಕ್ಸಿಡೆಂಟಲ್ ಪ್ರಾಂತ್ಯಗಳಿಂದ ಸಾವುಗಳು ಸಂಭವಿಸಿದ್ಧವು
ಭೂಕಂಪದಿಂದ 13 ಜನರು ಗಾಯಗೊಂಡ ಬಗ್ಗೆ ವರದಿಯಾಗಿತ್ತು.
Advertisement. Scroll to continue reading.