Connect with us

Hi, what are you looking for?

Diksoochi News

ಕರಾವಳಿ

ಮಂಗಳೂರು : ನಾಲ್ಕೂವರೆ ತಿಂಗಳ ಹಸುಗೂಸನ್ನು ಕೊಂದು ತಾಯಿ ಆತ್ಮಹತ್ಯೆ

1

ಮಂಗಳೂರು : ನಾಲ್ಕೂವರೆ ತಿಂಗಳ ಹಸುಗೂಸನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಗುಜ್ಜರಕೆರೆಯಲ್ಲಿ ನಡೆದಿದೆ.

ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಹೂದ್ ಮತ್ತು ತಾಯಿ ಫಾತಿಮಾ ರುಕಿಯಾ(23) ಮೃತಪಟ್ಟವರು.


ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರೊಂದಿಗೆ ಫಾತಿಮಾ ರುಕಿಯಾ ವಿವಾಹವಾಗಿತ್ತು. 2023 ಜುಲೈ 7 ರಂದು ಹೆರಿಗೆಯಾಗಿತ್ತು. ಇವರಿಗೆ ಅಬ್ದುಲ್ಲಾ ಹೂದ್ ಎಂಬ ಸುಮಾರು 4 1/2 ತಿಂಗಳ ಗಂಡು ಮಗು ಇತ್ತು. ಹೆರಿಗೆಯಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ, ಫಾತಿಮಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ತಾಯಿಯೊಂದಿಗೆ ಹೇಳುತ್ತಿದ್ದರು ಎನ್ನಲಾಗಿದೆ.

Advertisement. Scroll to continue reading.


ಬಳಿಕ ಅವರಿಗೆ ಮಂಗಳೂರಿನಲ್ಲಿ ಮಾನಸಿಕ ಚಿಕಿತ್ಸೆ ನೀಡಲಾಗಿತ್ತು. ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಮಂಗಳೂರು ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್‌ ಬೆಡ್ ರೂಮ್‌ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್‌ನಲ್ಲಿ ನೀರು ತುಂಬಿಸಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಬಳಿಕ ತಾನೂ ರೂಮಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!