ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಮಲ ಅರಳಿದೆ. ಬಹುಮತದೊಂದಿಗೆ 3 ಕ್ಷೇತ್ರಗಳಲ್ಲಿ ಬಿಜೆಪಿ ಗದ್ದುಗೆ ಹಿಡಿಯಲಿದೆ.
ಮಧ್ಯಪ್ರದೇಶದಲ್ಲಿ 162 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಗೆದ್ದರೆ ಐದನೇ ಬಾರಿ ಮಧ್ಯಪ್ರದೇಶದ ಗದ್ದುಗೆ ಹಿಡಿಯುತ್ತಿದೆ. ಕಾಂಗ್ರೆಸ್ 67 ಕ್ಷೇತ್ರಗಳಿಗೆ ತೃಪ್ತಿ ಪಡಬೇಕಾಗಿದೆ.
ಛತ್ತೀಸ್‌ಗಢದಲ್ಲಿ ಭಾರೀ ಫೈಟ್ ಏರ್ಪಟ್ಟಿತ್ತು. ಬಳಿಕ ಮುನ್ನಡೆ ಕಾಯ್ದುಕೊಂಡು ಬಿಜೆಪಿ ಗೆಲುವಿನ ನಗೆ ಬೀರಿತು. 54 ಕ್ಷೇತ್ರಗಳಲ್ಲಿ ಗೆಲುವು ಕಂಡು, ಕಾಂಗ್ರೆಸ್ 36 ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡುಕೊಂಡಿತು.
ರಾಜಸ್ಥಾನದಲ್ಲಿ ಕಮಲ ನಕ್ಕಿದೆ. ಬಿಜೆಪಿ 115 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚನೆಗೆ ಸಿದ್ಧವಾಗಿದೆ. ಕಾಂಗ್ರೆಸ್ 70, ಇತರೆ 14 ಕ್ಷೇತ್ರಗಳಲ್ಲಿ ಗೆಲುವು ಕಂಡಿವೆ.
ತೆಲಂಗಾಣದಲ್ಲಿ ಆಡಳಿತರೂಢ ಬಿಆರ್‌ಎಸ್‌ಗೆ ಭಾರೀ ಮುಖಭಂಗವಾಗಿದ್ದು, ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸಿದೆ.119 ಕ್ಷೇತ್ರಗಳಲ್ಲಿ 65 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಬಿಆರ್‌ಎಸ್ 39 ಕ್ಷೇತ್ರದಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇದು ಹಾಲಿ ಮುಖ್ಯಮಂತ್ರಿ ಕೆಸಿ ಆರ್ ಗೆ ಭಾರೀ ಮುಖಭಂಗವೇ ಸರಿ. ಬಿಜೆಪಿ ಇದೇ ಮೊದಲ ಬಾರಿಗೆ 8 ಸ್ಥಾನ ಗೆದ್ದಿದೆ.AIMIM 7 ಕ್ಷೇತ್ರ ಪಡೆದಿದೆ.
ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು.