ಛತ್ತೀಸ್‌ಗಢದಲ್ಲಿ ಭಾರೀ ಫೈಟ್ ಏರ್ಪಟ್ಟಿತ್ತು. ಬಳಿಕ ಮುನ್ನಡೆ ಕಾಯ್ದುಕೊಂಡು ಬಿಜೆಪಿ ಗೆಲುವಿನ ನಗೆ ಬೀರಿತು. 58 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ, ಕಾಂಗ್ರೆಸ್ 31 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಮಧ್ಯಪ್ರದೇಶದಲ್ಲಿ 161 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಐದನೇ ಬಾರಿ ಮಧ್ಯಪ್ರದೇಶದ ಗದ್ದುಗೆ ಹಿಡಿಯುತ್ತಿದೆ. ಕಾಂಗ್ರೆಸ್ 66 ಕ್ಷೇತ್ರಗಳಿಗೆ ಮುನ್ನಡೆ ಹೊಂದಿದೆ.
ರಾಜಸ್ಥಾನದಲ್ಲಿ ಬಿಜೆಪಿ 113 ಕ್ಷೇತ್ರಗಳಲ್ಲಿ ಗೆಲ್ಲುವತ್ತ ಸಾಗಿದೆ. ಕಾಂಗ್ರೆಸ್ 67, ಇತರೆ 19 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.
ತೆಲಂಗಾಣದಲ್ಲಿ ಆಡಳಿತರೂಢ ಬಿಆರ್‌ಎಸ್‌ಗೆ ಭಾರೀ ಮುಖಭಂಗವಾಗಿದ್ದು, ಕಾಂಗ್ರೆಸ್ 119 ಕ್ಷೇತ್ರಗಳಲ್ಲಿ 68 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಆರ್‌ಎಸ್ 38 ಕ್ಷೇತ್ರದಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇದು ಹಾಲಿ ಮುಖ್ಯಮಂತ್ರಿ ಕೆಸಿ ಆರ್ ಗೆ ಭಾರೀ ಮುಖಭಂಗವೇ ಸರಿ.
ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು.