Connect with us

Hi, what are you looking for?

Diksoochi News

ರಾಷ್ಟ್ರೀಯ

ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ; ಟ್ರೆಂಡ್ ಆಗುತ್ತಿದೆ ‘ಮೋದಿ ಕಿ ಗ್ಯಾರಂಟಿ’ ಪೋಸ್ಟ್

1

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಇದರ ಬೆನ್ನಲ್ಲೇ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಬಿಜೆಪಿ ನಾಯಕರು ‘ದೇಶಕ್ಕೆ ಮೋದಿಯೇ ಗ್ಯಾರಂಟಿ’ ಎಂದು ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ.

ಗ್ಯಾರಂಟಿ ಘೋಷಣೆ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಯಶಸ್ವಿ ಆಗುತ್ತಿದ್ದಂತೆ ಕಾಂಗ್ರೆಸ್‌ ಈಗ ನಡೆಯುತ್ತಿರುವ ಚುನಾವಣಾ ರಾಜ್ಯಗಳಲ್ಲಿ ಗ್ಯಾರಂಟಿ ಘೋಷಣೆಗಳನ್ನು ಆರಂಭಿಸಿತ್ತು. ಇದು ಗೆಲುವಿಗೆ ಕಾರಣವಾಗುತ್ತೆ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಇದು ವರ್ಕೌಟ್ ಆಗಿಲ್ಲ.

ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ #ModiKiGuarantee ಟ್ರೆಂಡ್‌ ಶುರು ಆಗಿದೆ. ದೇಶಕ್ಕೆ “ನಮೋ‌” ಗ್ಯಾರಂಟಿ. ಪ್ರಧಾನಿ ಶ್ರೀ ನರೇಂದ್ರ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಕರ್ನಾಟಕ ಬಿಜೆಪಿ ಪೋಸ್ಟ್‌ ಮಾಡಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!