ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಚಂದ್ರಶೇಖರ ರಾವ್ ಅವರ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಗೆ ಭಾರೀ ಮುಖಭಂಗವಾಗಿದೆ.
ಮುಖ್ಯಮಂತ್ರಿ ಕೆಸಿಆರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ ವಿರುದ್ಧ ಹಿನ್ನಡೆ ಅನುಭವಿಸುತ್ತಿದ್ದಾರೆ. ರೆಡ್ಡಿ ಅವರು ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿದ್ದು ಕಾಂಗ್ರೆಸ್ ಭರ್ಜರಿ ಗೆಲುವಿನ ರುವಾರಿ ರೇವಂತ್ ರೆಡ್ಡಿ ಎಂಬ ಮಾತು ಕೇಳಿ ಬರುತ್ತಿದೆ. ಇದರೊಂದಿಗೆ ತೆಲಂಗಾಣದಲ್ಲಿ ಸರ್ಕಾರ ರಚನೆಯಾದಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಯೂ ಆರಂಭವಾಗಿದೆ. ಈ ರೇಸ್ ನಲ್ಲಿ ರೆಡ್ಡಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
ABVP ಹಿನ್ನೆಲೆ :
ತೆಲಂಗಾಣ ಗೆಲುವಿನ ಹಿಂದೆ 54 ವರ್ಷದ ರೇವಂತ್ ರೆಡ್ಡಿ ಹೆಸರು ಸದ್ದು ಮಾಡುತ್ತಿದೆ. ರೆಡ್ಡಿ ಸದ್ಯ ಲೋಕಸಭಾ ಸದಸ್ಯರೂ ಆಗಿದ್ದು, ತೆಲಂಗಾಣದ ಸಿಎಂ ಆಗುವ ಸಾಧ್ಯತೆ ಇದು. ಈ ನಡುವೆ ರೇವಂತ್ ರೆಡ್ಡಿಯನ್ನು ‘ಬಿಜೆಪಿಯವರು’ ಎಂಬ ವಿಚಾರ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯೊಂದಿಗೆ ರೆಡ್ಡಿ ಅವರ ಒಡನಾಟ. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವಿಭಜಿತ ಆಂಧ್ರಪ್ರದೇಶದ ಅವಧಿಯಲ್ಲಿ, ರೆಡ್ಡಿ ಕೊಡಂಗಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಇದಾದ ನಂತರ 2009 ಮತ್ತು 2014ರಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ರಾಜಕೀಯ ಪಯಣ :
ಕಾಲೇಜು ದಿನಗಳಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿದ್ದ ರೆಡ್ಡಿ ಮೊದಲ ಚುನಾವಣೆಗೆ ಬಂದಾಗ ಎಲ್ಲಾ ಪಕ್ಷದಿಂದಲೂ ಅಂತರ ಕಾಪಾಡಿಕೊಂಡಿದ್ದರು. ಮೊದಲಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ರೆಡ್ಡಿ, ಯಶಸ್ವಿಯಾಗಿ ಚುನಾವಣಾ ರಾಜಕೀಯ ಆರಂಭಿಸಿದ್ದರು. 2007ರಲ್ಲಿ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ರೇವಂತ್ ರೆಡ್ಡಿ ಅಕ್ಟೋಬರ್ 2017ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿದರು. ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಮಲ್ಕಾಜಿಗಿರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಿತು.
ಮುಂದೆ ಟಿಡಿಪಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ರೇವಂತ್ ರೆಡ್ಡಿ ತೆಲುಗು ದೇಶಂ ಪಕ್ಷ ಸೇರ್ಪಡೆಯಾದರು. 2009ರಲ್ಲಿಅವಿಭಜಿತ ಆಂಧ್ರ ಪ್ರದೇಶದ ಕೋಡಂಗಲ್ ಕ್ಷೇತ್ರದಿಂದ ಟಿಡಿಪಿ ಟಿಕೆಟ್‌ನಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು.
ಮುಂದೆ 2014ರಲ್ಲಿ ರಾಜ್ಯ ಇಬ್ಭಾಗವಾದಾಗ ಅವರ ಕ್ಷೇತ್ರ ತೆಲಂಗಾಣ ಪಾಲಾಯಿತು. ರೆಡ್ಡಿ ತೆಲಂಗಾಣ ಟಿಡಿಪಿಯ ಪ್ರಮುಖ ನಾಯಕರಾದರು. 2014ರಲ್ಲಿ ರೇವಂತ್ ರೆಡ್ಡಿ ಗೆಲುವು ಸಾಧಿಸಿದ್ದಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತ್ತು.
ಕಾಂಗ್ರೆಸ್‌ನತ್ತ :
2015ರಲ್ಲಿ ನಾಮನಿರ್ದೇಶಿತ ಆಂಗ್ಲೋ-ಇಂಡಿಯನ್ ಶಾಸಕ ಎಲ್ವಿಸ್ ಸ್ಟೀಫನ್‌ಸನ್‌ಗೆ ಲಂಚ ನೀಡುವ ವೇಳೆ ಸಿಕ್ಕಿಬಿದ್ದಿದ್ದರು. ಎಸಿಬಿ ರೇವಂತ್ ರೆಡ್ಡಿಯನ್ನು ಬಂಧಿಸಿತ್ತು. 30 ದಿನಗಳ ಕಾಲ ರೆಡ್ಡಿ ಜೈಲಿನಲ್ಲಿ ಇರಬೇಕಾಯಿತು. ಮುಂದೆ ಶಾಸಕರು ಸರಣಿಯಾಗಿ ಟಿಆರ್‌ಎಸ್‌ಗೆ ಲಗ್ಗೆ ಇಡಲಾರಂಭಿಸಿದರು. ಅತ್ತ ಚಂದ್ರಬಾಬು ನಾಯ್ಡು ಕೂಡ ಆಂಧ್ರಕ್ಕೆ ಹೆಚ್ಚಿನ ಒತ್ತು ನೀಡಲಾರಂಭಿಸಿ, ತೆಲಂಗಾಣದತ್ತ ಗಮನ ಕೊಡಲಿಲ್ಲ. ಹೀಗಾಗಿ ರೇವಂತ್ ರೆಡ್ಡಿ ‘ಕೈ’ ಹಿಡಿದರು.
2021ರ ಜೂನ್‌ನಲ್ಲಿ ರಾಜ್ಯಾಧ್ಯಕ್ಷ ಹುದ್ದೆ ವಹಿಸಿಕೊಂಡು ಕಾಂಗ್ರೆಸ್ ಕಚೇರಿಗೆ ಕಾಲಿಟ್ಟರು.
2022ರ ಫೆಬ್ರವರಿ 7ರಂದು ಪಾದಯಾತ್ರೆ ಆರಂಭಿಸಿದ ರೇವಂತ್ ರೆಡ್ಡಿ 60 ವಿಧಾನಸಭಾ ಕ್ಷೇತ್ರಗಳಿಗೆ ನಡೆದು ಹೋದರೆ. ಮುಂದೆ ಇದೇ ಮಾದರಿಯಲ್ಲಿ ಮಲ್ಲು ಭಟ್ಟಿ ವಿಕ್ರಮಾರ್ಕ 2023ರ ಮಾರ್ಚ್ 16ರಿಂದ ಸುದೀರ್ಘ ಅವಧಿಯ ಪಾದಯಾತ್ರೆ ಹಮ್ಮಿಕೊಂಡರು. 109 ದಿನಗಳ ಈ ಯಾತ್ರೆ ಜುಲೈ 1ರಂದು ಕಮ್ಮಮ್‌ನಲ್ಲಿ ಕೊನೆಯಾಯಿತು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ರೇವಂತ್ ರೆಡ್ಡಿಯ ಆತ್ಮೀಯ ಡಿಕೆ ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಗೇರಿದ್ದರು.
ಕರ್ನಾಟಕದಲ್ಲಿ ಯಶಸ್ವಿಯಾಗಿ ಚುನಾವಣಾ ತಂತ್ರಗಾರಿಕೆ ನಿರ್ವಹಿಸಿದ್ದ ಸುನೀಲ್ ಕನುಗೋಳ್ ತಂಡವನ್ನು ತೆಲಂಗಾಣಕ್ಕೂ ಕರೆಸಿಕೊಳ್ಳಲಾಯಿತು. ಕರ್ನಾಟಕದಿಂದ ಸಿಎಂ, ಡಿಸಿಎಂ ತೆಲಂಗಾಣದಲ್ಲಿ ರೇವಂತ್‌ಗೆ ಜೊತೆಯಾದರು.