ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐದು ಪಂದ್ಯಗಳ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯವನ್ನು ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಭಾರತ ತಂಡ ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್‌ಗಳನ್ನು ಕಲೆಹಾಕಿತ್ತು. ಆಸ್ಟ್ರೇಲಿಯಾ ತಂಡಕ್ಕೆ 161 ರನ್‌ಗಳ ಸವಾಲಿನ ಗುರಿ ನೀಡಿತ್ತು.
ಯಶಸ್ವಿ ಜೈಸ್ವಾಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 10 ರನ್ ಗಳಿಗೆ ರುತುರಾಜ್ ಗಾಯಕ್ವಾಡ್ ಕೂಡಾ ಔಟಾದರು.
ನಂತರ ಬಂದ ಶ್ರೇಯಸ್ ಅಯ್ಯರ್ 37 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 53 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟುವಂತೆ ನೋಡಿಕೊಂಡರು. ನಾಯಕ ಸೂರ್ಯಕುಮಾರ್ ಯಾದವ್ 5 ರನ್, ರಿಂಕು ಸಿಂಗ್ 6 ರನ್ ಗಳಿಸಿದರು.
ಜಿತೇಶ್ ಶರ್ಮಾ 24 ರನ್, ಅಕ್ಷರ್ ಪಟೇಲ್ 31 ರನ್ ಗಳಿಸಿದರು.
ಇನ್ನು ಗುರಿ ಬೆನ್ನಟಿದ ಆಸ್ಟ್ರೇಲಿಯಾ ತಂಡ ಗೆಲ್ಲುವ ಪ್ರಯತ್ನ ಮಾಡಿತು. ಆದರೆ, ನಿಗದಿತ ಓವರ್‌ಗೆ 154 ರನ್ ಗಳಿಸಲಷ್ಟೇ ಶಕ್ಯವಾಯಿತು. 8 ವಿಕೆಟ್ ನಷ್ಟಕ್ಕೆ ರೋಚಕ ಹಣಾಹಣಿ ನಡೆಸಿ ಕೊನೆಗೆ ಸೋಲೊಪ್ಪಿಕೊಂಡಿತು.
ಮುಖೇಶ್ ಕುಮಾರ್ 3, ಅರ್ಶ್ ದೀಪ್ ಸಿಂಗ್ 2, ಅಕ್ಷರ್ ಪಟೇಲ್ 2, ಬಿಷ್ಣೋಯ್ 1 ವಿಕೆಟ್ ಕಬಳಿಸಿದರು.