ಛತ್ತೀಸ್‌ಗಢ : ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇದು ಅಚ್ಚರಿಯ ಗೆಲುವಾಗಿದ್ದರೆ, ಮತ್ತೊಂದೆಡೆ ಸೇಡಿನ ಗೆಲುವೊಂದು ಈ ಕ್ಷೇತ್ರದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ತನ್ನ ಮಗನ ಸಾವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಚುನಾವಣೆಗೆ ನಿಂತಿದ್ದ ತಂದೆಯೋರ್ವ ಭರ್ಜರಿ ಜಯ ದಾಖಲಿಸಿರುವ ಸುದ್ದಿ ವೈರಲ್ ಆಗುತ್ತಿದೆ.
ಅದರಲ್ಲೂ ಆತ ಗೆದ್ದಿದ್ದು ೭ ಬಾರಿ ಚುನಾವಣೆ ಗೆದ್ದಿದ್ದ ಆ ರಾಜ್ಯದ ಸಚಿವನ ವಿರುದ್ಧ.
ಸಜಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಈಶ್ವರ್ ಸಾಹು ಎನ್ನುವವರು ಇದೇ ಮೊದಲ ಬಾರಿ ಚುನಾವಣೆ ಎದುರಿಸಿ ಅಲ್ಲಿನ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಚೌಬೆ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅದು ಕೂಡ ೪೦ ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಮಗನ ಸಾವು – ಸೇಡಿಗಾಗಿ ಸ್ಪರ್ಧೆ!
೨೦೨೩ ಏಪ್ರಿಲ್ ೮ ರಂದು ಸಜಾ ಕ್ಷೇತ್ರದ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಮಕ್ಕಳ ಜಗಳದಿಂದ ಆರಂಭವಾಗಿ ನಂತರ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಬೆಂಕಿ ಹಚ್ಚುವಂತಹ ಘಟನೆಗಳೂ ನಡೆದವು. ಈ ಘಟನೆಯ ನಾಲ್ಕು ದಿನಗಳ ನಂತರ, ಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಈಶ್ವರ್ ಸಾಹು ಅವರ ಮಗ ಭುವನೇಶ್ವರ ಸಾಹು ಕೊಲೆಯಾಗಿದ್ದರು. ಛತ್ತೀಸ್‌ಗಢದ ಭೂಪೇಶ್ ಬಘೇಲ್ ಸರ್ಕಾರದ ವಿರುದ್ಧ ಜನಾಕ್ರೋಶ ಎದುರಾಗಿತ್ತು.
ಅಂದಿನ ಛತ್ತೀಸ್‌ಗಢ ಕಾಂಗ್ರೆಸ್ ಸರ್ಕಾರ ಭುವನೇಶ್ವರ್ ಸಾಹು ಕುಟುಂಬಕ್ಕೆ ೧೦ ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿತ್ತು, ಆದರೆ ಸಂತ್ರಸ್ತರ ಕುಟುಂಬ ಅದನ್ನು ಪಡೆಯಲು ನಿರಾಕರಿಸಿತುಉ. ಸಂತ್ರಸ್ತರ ಕುಟುಂಬ ನಮಗೆ ನ್ಯಾಯ ಬೇಕು, ಹಣ ಮತ್ತು ಸರ್ಕಾರಿ ಉದ್ಯೋಗವಲ್ಲ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಹತ್ಯೆ ಮಾಡಿದವರ ಬೆಂಬಲವಾಗಿ ನಿಂತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಬಿಜೆಪಿ ಈಶ್ವರ್ ಸಾಹು ಅವರಿಗೆ ಟಿಕೆಟ್ ನೀಡಿತ್ತು.
ಸದ್ಯ ಈಶ್ವರ್ ಸಾಹು ಅವರು ೪೦ ಸಾವಿರ ಮತಗಳ ಅಂತದಲ್ಲಿ ಗೆದ್ದಿದ್ದಾರೆ. ಕೋಮುಗಲಭೆಯಲ್ಲಿ ಸಾವನನ್ನಪ್ಪಿದ ಮಗನಿಗೆ ತಂದೆ ನ್ಯಾಯ ಕೊಡಿಸಿದ್ದಾರೆ ಎಂದು ಸಾಕಷ್ಟು ಮಂದಿ ಕೊಂಡಾಡುತ್ತಿದ್ದಾರೆ.
ಅಭಿನಂದಿಸಿದ ಬಿಎಲ್ ಸಂತೋಷ್ :
ಈ ಬಗ್ಗೆ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರು ಟ್ವೀಟ್ ಮಾಡಿ ಸಂತಸ ಹಂಚಿಕೊಂಕಡಿದ್ದಾರೆ. ಇವರೇ ಶ್ರೀ ಈಶ್ವರ ಸಾಹು. ಛತ್ತೀಸ್‌ಗಢ ಬಿಜೆಪಿ ಅಭ್ಯರ್ಥಿ. ೭ ಬಾರಿ ಗೆದ್ದಿದ್ದ ರವೀಂದ್ರ ಚೌಬೆ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿದರು ಸೋಲಿಸಿದ್ದಾರೆ. ಸಾಹು ಅವರ ಅವರ ಮಗ ಗುಂಪು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟರು. ಎಂದಿನಂತೆ ಕಾಂಗ್ರೆಸ್ ಗಲಭೆಕೋರರಿಗೆ ಬೆಂಬಲ ನೀಡಿತು. ಇಂದು ಅವರು ಪ್ರಜಾಪ್ರಭುತ್ವದ ಯುದ್ಧದಲ್ಲಿ ಅನ್ಯಾಯದ ಸೇಡು ತೀರಿಸಿಕೊಂಡರು. ಅಭಿನಂದನೆಗಳು ಎಂದು ಹೇಳಿದ್ದಾರೆ.