ಕುಂದಾಪುರ :ಸಾಲ ಬಾಧೆಯಿಂದ ವ್ಯಾಪಾರಿ ನೇಣಿಗೆ ಶರಣಾಗಿರುವ ಘಟನೆ ಬೀಜಾಡಿಯಲ್ಲಿ ನಡೆದಿದೆ.
ಉದಯ (47) ಆತ್ಮಹತ್ಯೆ ಮಾಡಿಕೊಂಡವರು. ಇವರು ಬೀಜಾಡಿ ಗ್ರಾಮದಲ್ಲಿ ಮೀನು ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದರು.
ಸೋಮವಾರ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಮೀನು ಅಂಗಡಿಗೆ ಹೋಗುವುದಾಗಿ ಹೆಂಡತಿಗೆ ತಿಳಿಸಿ ಹೋಗಿದ್ದಾರೆ. ಬೆಳಿಗ್ಗೆ 7:30ಕ್ಕೆ ಕೆಲಸದವರಾದ ರಾಜು ಅವರು ಅಂಗಡಿ ಬಳಿ ಬಂದು ಶೇಟರ ಬೀಗ ಹಾಕದೇ ಇದ್ದದ್ದನ್ನ ನೋಡಿ ಶೇಟರ್ ಎತ್ತಿದಾಗ ಉದಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Advertisement. Scroll to continue reading.
ಉದಯ ಅವರು ಸಾಲ ಬಾದೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.