ಬೆಂಗಳೂರು : ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಂಗಳೂರಿನ ಮೂರು ಕಡೆ ಸೇರಿ ರಾಜ್ಯದ ೬೩ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಶೋಧ ನಡೆಸುತ್ತಿದೆ.
ಸುಮಾರು ೨೦೦ಕ್ಕೂ ಹೆಚ್ಚು ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಬೆAಗಳೂರಿನಲ್ಲಿ ಮೂರು ಕಡೆ, ಕಲಬುರಗಿ, ಬೀದರ್ ನಲ್ಲಿ ತಲಾ ೨ ಕಡೆ ಹಾಗೂ ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಧಾರವಾಡದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕಣಿಮಿನಿಕೆ ಹಾಲು ಉತ್ಪಾದಕ ಕೋ ಆಪರೇಟಿವ್ ಸೊಸೈಟಿ, ಕುಂಬಳಗೋಡುವಿನ ಚೀಪ್ ಎಕ್ಸಿಕ್ಯುಟಿವ್ ಹೆಚ್. ಎಸ್ ಕೃಷ್ಣಮೂರ್ತಿ ಇವರಿಗೆ ಸೇರಿದ ಐದು ಕಡೆ ದಾಳಿ ನಡೆದಿದೆ.
ಡಿಜಿಎಂ ವಿಜಿಲೇನ್ಸ್ ಇಇ ಬೆಸ್ಕಾಂನ ಟಿ.ಎನ್ ಸುಧಾಕರ್ ರೆಡ್ಡಿ ಅವರ ಐದು ಸ್ಥಳಗಳಿಗೆ, ಆರ್.ಎಫ್.ಓ ಆನೆಗುಂದಿ ಕೊಪ್ಪಳದ ಬಿ.ಮಾರುತಿ,
ಚಂದ್ರಶೇಖರ್, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಳ್ಳಾರಿ, ಶರಣಪ್ಪ, ಆಯುಕ್ತರು, ನಗರ ಪಾಲಿಕೆ ಯಾದಗಿರಿ.
ಹೆಚ್‌ಡಿ ನಾರಾಯಣ ಸ್ವಾಮಿ, ನಿವೃತ್ತ ವೈಸ್ ಚಾನ್ಸಲರ್, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್, ಸುನೀಲ್ ಕುಮಾರ್, ಸಹಾಯಕ (ಔಟ್ ಸೋರ್ಸ್), ಹಣಕಾಸು ಕಚೇರಿಯ ನಿಯಂತ್ರಕರು, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್, ಡಾ.ಪ್ರಭುಲಿಂಗ, ಡಿಹೆಚ್ ಯಾದಗಿರಿ
ಮಹದೇವಸ್ವಾಮಿ, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು, ಮೈಸೂರು, ತಿಮ್ಮರಾಜಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೆಆರ್‌ಐಡಿಎಲ್, ವಿಜಯಪುರ ಜಿಲ್ಲೆ. (ಪ್ರಸ್ತುತ ಬೆಳಗಾವಿಯಲ್ಲಿ ಇಇ) ಕ್ಯಾಸಂಬಳ್ಳಿ ಹೋಬಳಿ, ಮಹದೇವಪುರ ಗ್ರಾಮ. ಕೆಜಿಎಫ್, ಕೋಲಾರ
ಮುನೇಗೌಡ ಎನ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ
ಬಸವರಾಜ, ಸ್ಟೋರ್ ಕೀಪರ್, ಗ್ರೇಡ್-೨, ಓ & ಎಂ ಸಿಟಿ ವಿಭಾಗ ಅಂಗಡಿ, ಹೆಸ್ಕಾಂ, ಹುಬ್ಬಳ್ಳಿ, (ನಿವೃತ್ತ)
ಚನ್ನಕೇಶವ, ಇಇ ಬೆಸ್ಕಾಂ, ಅಮೃತಹಳ್ಳಿ, ಜಕ್ಕೂರು ಈ ಅಧಿಕಾರಿಗಳು ಲೋಕಾಯುಕ್ತ ದಾಳಿಗೊಳಗಾಗಿದ್ದಾರೆ.
ಚಿನ್ನ, ವಜ್ರ, ನಗದು ಪತ್ತೆ :
ಜಕ್ಕೂರಿನಲ್ಲಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಡಿ.ಚನ್ನಕೇಶವ ಅವರ ಮನೆಯಲ್ಲಿ ಶೋಧ ನಡೆಸಿದಾಗ ೬ ಲಕ್ಷ ರೂಪಾಯಿ ನಗದು, ಅಂದಾಜು ೩ ಕೆಜಿ ತೂಕದ ಚಿನ್ನ, ೬ ಲಕ್ಷ ನಗದು, ೨೮ ಕೆಜಿ ಬೆಳ್ಳಿ, ೨೫ ಲಕ್ಷ ಮೌಲ್ಯದ ವಜ್ರ, ೫ ಲಕ್ಷ ಮೌಲ್ಯದ ಪುರಾತನ ವಸ್ತುಗಳು ಪತ್ತೆಯಾಗಿವೆ. ಇವುಗಳ ಅಂದಾಜು ೧.೫ ಕೋಟಿ ರೂಪಾಯಿ ಆಗಿದೆ ಎಂದು ವರದಿಯಾಗಿದೆ.
ಇನ್ನು ಸಹಕಾರ ನಗರದಲ್ಲಿರುವ ಚನ್ನಕೇಶವನ ಸೋದರ ಮಾವ ತರುಣ್ ಅವರ ಮನೆಯಲ್ಲಿ ಹೆಚ್ಚಿನ ದಾಳಿ ನಡೆಸಿದ ಅಧಿಕಾರಿಗಳು, ೫೦೦ ಮುಖಬೆಲೆಯ ೯೨,೯೫,೪೬೦ ರೂ ನಗದು ಮತ್ತು ೫೫ ಗ್ರಾಂ ಚಿನ್ನವನ್ನು ಪತ್ತೆಹಚ್ಚಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.