ನವದೆಹಲಿ: ಅಂಚೆ ಕಚೇರಿ ಮಸೂದೆ 2023ಕ್ಕೆ ರಾಜ್ಯಸಭೆಯು ಸೋಮವಾರ ಅಂಗೀಕಾರ ನೀಡಿದೆ. ಈ ಮಸೂದೆಯ ಮೂಲಕ 125 ವರ್ಷಗಳಷ್ಟು ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯ್ದೆಯನ್ನು ರದ್ದುಗೊಳಿಸಲು ಮುನ್ನುಡಿ ಬರೆಯಲಾಗಿದೆ.
ದೇಶದಲ್ಲಿನ ಅಂಚೆ ಕಚೇರಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಒಗ್ಗೂಡಿಸಿ, ತಿದ್ದುಪಡಿ ಮಾಡುವ ಉದ್ದೇಶ ಹೊಂದಿದೆ.
ಏನಿದು ಮಸೂದೆ?
Advertisement. Scroll to continue reading.
ದೇಶದ ಭದ್ರತೆಯ ಹಿತದೃಷ್ಟಿಯಿಂದ, ವಿದೇಶಗಳ ಜೊತೆಗಿನ ಸ್ನೇಹಸಂಬಂಧದ ದೃಷ್ಟಿಯಿಂದ, ಸಾರ್ವಜನಿಕ ಸುವ್ಯವಸ್ಥೆ, ತುರ್ತು ಸಂದರ್ಭ ಅಥವಾ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಯಾವುದೇ ಕಾನೂನಿನ ಉಲ್ಲಂಘನೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಯಾವುದೇ ಅಧಿಕಾರಿಗೆ ಯಾವುದೇ ವಸ್ತುವನ್ನು ಪರೀಕ್ಷಿಸುವ, ಅದನ್ನು ತೆರೆದು ನೋಡುವ ಅಥವಾ ಅದನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರ ನೀಡಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಈ ಮಸೂದೆಯನ್ನು ಮುಂಗಾರು ಅಧಿವೇಶನದ ಸಮಯದಲ್ಲಿ ಮಂಡಿಸಲಾಗಿತ್ತು.
Advertisement. Scroll to continue reading.
In this article:Diksoochi news, government, lokhsabhe, post card, post office, Rajyasabha
Click to comment