ಹಾಸನ : ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಅಂಬಾರಿಯನ್ನು 8 ಬಾರಿ ಹೊತ್ತು ನಿವೃತ್ತಿ ಹೊಂದಿದ್ದ ಅರ್ಜುನ, ಕಾಡಾನೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ. ಕಾರ್ಯಾಚರಣೆ ವೇಳೆ ಅರ್ಜುನನ್ನು ಕೊಲೆಗೈದ ಕಾಡಾನೆಯನ್ನು ನಾವು ಹಿಡಿದು ಜನರ ಮುಂದೆ ತಂದು ನಿಲ್ಲಿಸುತ್ತೇವೆ ಎಂದು ಅರ್ಜುನ ಆನೆಯ ಮಾವುತರು ಶಪಥ ಮಾಡಿದ್ದಾರೆ.
ಕಾಡಾನೆ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಅರ್ಜುನ ಆನೆಯ ಅಂತ್ಯಕ್ರಿಯೆ ನೆರವೇರಿಸಿದ ನಂತರ, ಮಾವುತರು ಕಾಡಾನೆಯನ್ನು ಸೆರೆ ಹಿಡಿದು ತಂದೇ ತರುತ್ತೇವೆ. ಅರಣ್ಯಾಧಿಕಾರಿಗಳೊಂದಿಗೆ ಕಾರ್ಯಾಚರಣೆಗೆ ಹೋಗುತ್ತೇವೆ ಎಂದು ಅರ್ಜುನ ಆನೆಯ ಮಾವುತರು ಶಪಥ ಮಾಡಿದ್ದಾರೆ. ಅರ್ಜುನನ್ನು ಕೊಂದ ಕಾಡಾನೆಯನ್ನು ಜನರ ಮುಂದೆ ಸೆರೆಹಿಡಿದು ತಂದೇ ತರ್ತೇವೆ ಎಂದು ಹಿರಿಯ ಮಾವುತ ಗುಂಡಣ್ಣ ಹೇಳಿದ್ದಾರೆ.
ಅರ್ಜುನ ಆನೆಯನ್ನು ಕಳೆದುಕೊಂಡು ದುಃಖದಲ್ಲಿರುವ ಮಾವುತರಿಗೆ ಬಿಕ್ಕೋಡು ಕ್ಯಾಂಪ್‌ನಲ್ಲಿ ಸಾಂತ್ವನ ಹೇಳಲು ಬಂದಿದ್ದ ಅರಣ್ಯಾಧಿಕಾರಿಗಳೊಂದಿಗೆ ನೋವು ತೋಡಿಕೊಂಡು ಮಾವುತ ಗುಂಡಣ್ಣ, ನಾವು ಮತ್ತೊಮ್ಮೆ ಕಾರ್ಯಾಚರಣೆ ಸಿದ್ದ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅರ್ಜುನನ್ನ ಕಳೆದುಕೊಂಡು ಚಿಂತೆಯಾಗಿದೆ. ನಮಗೂ ನೋವಾಗಿದೆ, ಆದ್ರೆ ಮನಸ್ಸು ಗಟ್ಟಿಮಾಡಿಕೊಂಡಿದ್ದೇವೆ. ಯಾರೂ ಏನೂ ಮಾಡೋದಕ್ಕೆ ಆಗಲ್ಲ, ಮತ್ತೆ ಬರುತ್ತೇವೆ. ನಾವು ಅದನ್ನ ಹಿಡಿಯೋ ಆಸೆಯಿದೆ ಮತ್ತೆ ಇದೇ ಕ್ಯಾಂಪ್‌ಗೆ ಬರ್ತೇವೆ. ಅದನ್ನ ಹಿಡಿದು ಜನರು ಅದನ್ನ ನೋಡಬೇಕು ಹಾಗೆ ನಾವು ಮಾಡ್ತೇವೆ ಎಂದು ಹೇಳಿಕೊಂಡಿದ್ದಾರೆ.