ಕೋಟ : ಆಕಸ್ಮಿಕವಾಗಿ ಬೆಂಕಿ ತಗುಲಿ ವೃದ್ಧೆ ಸಾವನ್ನಪ್ಪಿರುವ ಘಟನೆ ಪಾರಂಪಳ್ಳಿ ಗ್ರಾಮದಲ್ಲಿ ನಡೆದಿದೆ. ಅಕ್ಕು(೮೨) ಮೃತಪಟ್ಟವರು.
ಅಕ್ಕು ಅವರು ಡಿ.೪ ರಂದು ಬಿಸಿ ನೀರು ಕಾಯಿಸಲು ಒಲೆಗೆ ಬೆಂಕಿ ಹಾಕುವಾಗ ಆಕಸ್ಮಿಕವಾಗಿ ಸೀರೆ ಹಾಗೂ ಲಂಗಕ್ಕೆ ಬೆಂಕಿ ಹಿಡಿದಿದೆ. ಪರಿಣಾಮ ಅವರ ದೇಹ ಸುಟ್ಟು ಹೋಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ, ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.