ಅಲಹಾಬಾದ್ : ಮಥುರಾ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲಹಾಬಾದ್ ಹೈಕೋರ್ಟ್ ಹಿಂದೂ ಪರ ಅರ್ಜಿಯನ್ನು ಗುರುವಾರ (ಡಿ.14) ಸ್ವೀಕರಿಸಿದೆ. ಈ ಮೂಲಕ ಮಸೀದಿ ಆವರಣದಲ್ಲಿ ನ್ಯಾಯಾಲಯದ ಆಯೋಗದ ಸಮೀಕ್ಷೆಗೆ ಅಸ್ತು ಅಂದಿದೆ.
ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಿದ್ದು, ಸಮೀಕ್ಷೆಗೆ ಅವಕಾಶ ನೀಡಬಾರದು ಎಂಬ ಈದ್ಗಾ ಸಮಿತಿ ಮತ್ತು ವಕ್ಫ್ ಬೋರ್ಡ್‌ನ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಹಿಂದೂ ಪರ ವಕೀಲ ವಿಷ್ಣು ಜೈನ್ ಮಾತನಾಡಿ, ನಾವು ಅಡ್ವೊಕೇಟ್ ಕಮಿಷನರ್ ನೇಮಕವನ್ನ ನೀಡುತ್ತಿದ್ದೇವೆ. ಶಾಹಿ ಈದ್ಗಾ ಸಂಕೀರ್ಣದ ಎಎಸ್‌ಐ ಸಮೀಕ್ಷೆಯನ್ನ ನ್ಯಾಯಾಲಯ ಅನುಮೋದಿಸಿದೆ. ಆದರೆ, ಎಎಸ್‌ಐ ಸಮೀಕ್ಷೆ ಯಾವಾಗ ನಡೆಯಲಿದೆ, ಎಷ್ಟು ಮಂದಿ ಭಾಗವಹಿಸುತ್ತಾರೆ ಎಂಬುದು ಡಿಸೆಂಬರ್ 18ರಂದು ನಿರ್ಧಾರವಾಗಲಿದೆ ಎಂದರು.
Advertisement. Scroll to continue reading.