ಕೇರಳದಲ್ಲಿ ಮತ್ತೆ ಕೊರೋನಾ ಆತಂಕ ಶುರುವಾಗಿದೆ. ಒಂದು ತಿಂಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 12 ರಿಂದ 150 ಕ್ಕೆ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ, 10 ದಿನಗಳಲ್ಲಿ ಮೂರು ಸಾವುಗಳಾಗಿರುವ ಬಗ್ಗೆ ವರದಿಯಾಗಿವೆ.
ಕೇರಳದಲ್ಲಿ ಬುಧವಾರ 230 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 949ಕ್ಕೆ ಏರಿಕೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.
ಮೂರು ಬಲಿ :
ಕೇರಳದಲ್ಲಿ ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಮೂರು ಕೊರೊನಾ ಕಾರಣದಿಂದ ಸಾವುಗಳ ಸಂಭವಿಸಿವೆ. ಕೋವಿಡ್ ತಪಾಸಣೆ ಕಡಿಮೆಯಾಗಿದ್ದರೂ ಸಹ ಸಾವುಗಳಲ್ಲಿ ಮಂದ ಏರುಗತಿ ಇದೆ. ಅಂತ್ಯಕ್ರಿಯೆಯ ವೇಳೆ ಕೋವಿಡ್ ಸಂತ್ರಸ್ತರ ಕುಟುಂಬಗಳು ಪ್ರೋಟೋಕಾಲ್ ಅನುಸರಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ರಾಜ್ಯದ ಪತ್ತನಂತಿಟ್ಟದ ಕುಂಬನಾಡ್ ನಿವಾಸಿ ಅಲೆಕ್ಸ್ ವರ್ಗೀಸ್ (70) ಅವರು ಭಾನುವಾರ ಕೋವಿಡ್‌ನಿಂದ ನಿಧನರಾದರು. ಅಲೆಕ್ಸ್ ಹೃದ್ರೋಗಿಯಾಗಿದ್ದು, ಅವರ ಮಗ ಆರೋಗ್ಯ ಕಾರ್ಯಕರ್ತನಿಂದ ಸೋಂಕಿಗೆ ಒಳಗಾಗಿದ್ದಾರೆ.
ಇವರು ಅಗತ್ಯ ಕೋವಿಡ್ ಡೋಸ್‌ಗಳನ್ನು ಪಡೆದಿದ್ದರೂ ಸಹಿತ ರೋಗದ ಲಕ್ಷಣಗಳು ಕಂಡು ಬಂದಿದ್ದವು. ಆದರೆ ಕೊಮೊರ್ಬಿಡಿಟಿಗಳು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು. ಎರಡು ದಿನ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.