ದಶಕಗಳ ಕಾಲ ಮುಂಬೈ ಇಂಡಿಯನ್ಸ್ ಸಾರಥಿಯಾಗಿದ್ದ ರೋಹಿತ್ ಶರ್ಮಾ ಅವರನ್ನು ಬದಲಿಸಿ ಹಾರ್ದಿಕ್ ಪಾಂಡ್ಯರಿಗೆ ನಾಯಕ ಪಟ್ಟ ನೀಡಲಾಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಪರ್ಯಾಸ ಅಂದರೆ, ಈ ಘೋಷಣೆ ಹೊರಬಿದ್ದ ಒಂದೇ ಗಂಟೆಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 4 ಲಕ್ಷ ಫಾಲೋವರ್ಸ್‌ನ್ನು ಕಳೆದುಕೊಂಡಿದೆ. ಮತ್ತೊಂದೆಡೆ, ಅಭಿಮಾನಿಗಳು ಮುಂಬೈ ಜರ್ಸಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯಾಗೆ ನಾಯಕತ್ವ ನೀಡಿರುವುದು ಇದೀಗ ಕೋಲಾಹಲಕ್ಕೆ ಕಾರಣವಾಗಿದೆ. ಈ ನಿರ್ಧಾರ ಘೋಷಿಸಿದ ಒಂದೇ ಗಂಟೆಯಲ್ಲಿ ಎಕ್ಸ್ ಖಾತೆಯಲ್ಲಿ ಮುಂಬೈ ಇಂಡಿಯನ್ಸ್ 4 ಲಕ್ಷ ಫಾಲೋವರ್ಸ್ ಕಳೆದುಕೊಂಡಿದೆ. ಮುಂಬೈ ಇಂಡಿಯನ್ಸ್ ಹಿಂಬಾಲಿಸುತ್ತಿದ್ದ ಅಭಿಮಾನಿಗಳು ಈ ಬಾರಿ ಮುಂಬೈ ಬೆಂಬಲಿಸಲ್ಲ ಎಂದು ಅನ್‌ಫಾಲೋ ಮಾಡಿದ್ದಾರೆ.
ಎಕ್ಸ್ ಖಾತೆಯಲ್ಲಿ 8.6 ಮಿಲಿಯನ್ ಫಾಲೋವರ್ಸ್ ಹೊಂದಿದ ಮುಂಬೈ ಇಂಡಿಯನ್ಸ್, ನಾಯಕತ್ವ ಬದಲಾವಣೆ ನಿರ್ಧಾರ ಪ್ರಕಟಗೊಂಡ ಒಂದೇ ಗಂಟೆಯಲ್ಲಿ ಫಾಲೋವರ್ಸ್ ಸಂಖ್ಯೆ 8.2 ಮಿಲಿಯನ್‌ಗೆ ಕುಸಿತ ಕಂಡಿದೆ.
ಕಳೆದ 10 ವರ್ಷದಿಂದ ಮುಂಬೈ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ, 5 ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಅಷ್ಟೇ ಅಲ್ಲ, ಮುಂಬೈ ಮೂಲದವರಾಗಿರುವ ಕಾರಣ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಭಾವನಾತ್ಮಕವಾಗಿ ರೋಹಿತ್ ಜೊತೆಗೆ ಬೆಸೆದುಕೊಂಡಿದ್ದಾರೆ.