Connect with us

Hi, what are you looking for?

Diksoochi News

ಸಿನಿಮಾ

ಕಾಟೇರ ಟ್ರೇಲರ್ ಬಿಡುಗಡೆ: ಮಾಸ್ ಲುಕ್‌ನಲ್ಲಿ ಡಿ ಬಾಸ್; ಇದು ಮಚ್ಚು ಕಿಚ್ಚಿನ ಕಥೆ

0

ಚಂದನವನ : ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕಾಟೇರ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿನ ಡಿ ಬಾಸ್ ಅವತಾರ ಕಂಡು ಬೆರಗಾಗಿದ್ದಾರೆ. ಹೌದು, ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್‌ನ ಕಾಟೇರ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ. ಹೇಳಿ, ಕೇಳಿ ಇದು ಡಿ ಬಾಸ್ ಸಿನಿಮಾ…ಫ್ಯಾನ್ಸ್ ತುದಿಗಾಲಲ್ಲೇ ನಿಂತಿರುತ್ತಾರೆ. ಈಗ ಟ್ರೇಲರ್ ಬಿಡುಗಡೆಗೊಂಡಿದ್ದು, ಅಬ್ಬಾ! ಪಕ್ಕಾ ಮಾಸ್ ಗುರು ಅಂತಿದ್ದಾರೆ ಡಿಬಾಸ್ ಸೆಲೆಬ್ರಿಟಿಗಳು.

‘ಕಾಟೇರ’ 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೊಂದಿದೆ ಮಾಹಿತಿ ಈಗಾಗಲೇ ಇತ್ತು. ಇನ್ನು ಈಗಾಗಲೇ ಹೇಳಿದಂತೆ ಟ್ರೇಲರ್ ನೋಡಿದ್ರೇನೆ ಗೊತ್ತಾಗತ್ತೆ, ಇದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಭೀಮನಹಳ್ಳಿ…ಮಚ್ಚು…ಕಿಚ್ಚಿನ ಕಥೆ ಅನ್ನೋದು ಕನ್ಫಮ್ ಆಗೋಗಿದೆ.

ಇನ್ನು ಕಾಟೇರ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ದರ್ಶನ್‌ಗೆ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಜೊತೆಯಾಗಿದ್ದಾರೆ. ಶೃತಿ, ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement. Scroll to continue reading.

ಈಗಾಗಲೇ ಹರಿಕೃಷ್ಣ ಸಂಯೋಜನೆಯ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಜನಮನಸೂರೆಗೊಂಡಿವೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!