ಹೆಬ್ರಿ : ಸರ್ಕಾರದ ಆದೇಶದಂತೆ ಜಿಲ್ಲೆಯ ಹೆಬ್ರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದ್ದು, ಹೆಬ್ರಿ ತಾಲೂಕಿನ ಸಾಗುವಳಿ ಭೂಮಿಯ ಹಿಡುವಳಿದಾರರಿಗೆ ಸರಕಾರದಿಂದ ಬರ ಪರಿಹಾರದ ಮೊತ್ತವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.
ಆದ್ದರಿಂದ ಹೆಬ್ರಿ ತಾಲೂಕಿನ ಎಲ್ಲಾ ಸಾಗುವಳಿ ಭೂಮಿ ಹೊಂದಿದ ಸಾರ್ವಜನಿಕರು ತಮ್ಮ ಕೃಷಿ ಜಮೀನಿನ ಪಹಣಿಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲು ತಮ್ಮ ಸಮೀಪದ ತಾಲೂಕು ಕಛೇರಿ, ಗ್ರಾಮಕರಣಿಕರ ಕಚೇರಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ನೊಂದಿಗೆ ತೆರಳಿ ತಕ್ಷಣವೇ ನೋಂದಾಯಿಸಿಕೊಳ್ಳುವAತೆ ಹೆಬ್ರಿ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement. Scroll to continue reading.