ಬೆಂಗಳೂರು : 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬುಧವಾರ ಪ್ರಕಟವಾಗಿದೆ. ಕನ್ನಡದ ಹಿರಿಯ ಚಿಂತಕ, ಲೇಖಕ ಲಕ್ಷ್ಮೀಶ ತೋಳ್ಪಾಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲಕ್ಷ್ಮೀಶ ತೋಳ್ಪಾಡಿ ಅವರ ‘ಮಹಾಭಾರತ ಅನುಸಂಧಾನದ ಭಾರತಯಾತ್ರೆ’ ಪ್ರಬಂಧಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಲಕ್ಷ್ಮೀಶ ತೋಳ್ಪಾಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದವರು.
Advertisement. Scroll to continue reading.
ಒಟ್ಟು 24 ಭಾಷೆಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಇದರಲ್ಲಿ 9 ಕವನಗಳು, 6 ಕಾದಂಬರಿಗಳು, 5 ಸಣ್ಣ ಕಥೆಗಳು, ಮೂರು ಪ್ರಬಂಧಗಳು ಮತ್ತು ಒಂದು ಸಾಹಿತ್ಯ ಅಧ್ಯಯನ ಪ್ರಶಸ್ತಿ ಪಡೆದುಕೊಂಡಿವೆ.
ಮಲಯಾಳಂ ಭಾಷೆಯಲ್ಲಿ ಖ್ಯಾತ ಬರಹಗಾರ ಇ.ವಿ. ರಾಮಕೃಷ್ಣನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.
Advertisement. Scroll to continue reading.
In this article:award, Featured, kendra sahithya academy, laksheesha tholpady, Writer
Click to comment