Connect with us

Hi, what are you looking for?

Diksoochi News

ರಾಷ್ಟ್ರೀಯ

ಟೀ ಮಾಡುವ ವಿಚಾರದಲ್ಲಿ ಗಲಾಟೆ; ಪತ್ನಿಯನ್ನು ಕೊಂದ ಪತಿ!

1

ಗಾಜಿಯಾಬಾದ್‌ : ಟೀ ಮಡುವ ವಿಚಾರದಲ್ಲಿ ಜಗಳ ನಡೆದ ಬಳಿಕ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.

ಈಗಾಗಲೇ ಆರೋಪಿ ಪತಿಯನ್ನು ಬಂಧಿಸಲಾಗಿದೆ.

ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸುಂದರಿ(50) ಕೊಲೆಗೀಡಾದ ಪತ್ನಿ. ಧರ್ಮವೀರ್ ಆರೋಪಿ.

Advertisement. Scroll to continue reading.

ಇಬ್ಬರ ನಡುವೆ ಟೀ ಮಾಡುವ ವಿಚಾರದಲ್ಲಿ ಜಗಳ ನಡೆದಿದೆ.

ಜಗಳ ತಾರಕಕ್ಕೇರಿದ್ದು, ಮನೆಯಲ್ಲಿಟ್ಟಿದ್ದ ಹರಿತವಾದ ಆಯುಧದಿಂದ ಧರ್ಮವೀರ್ ಪತ್ನಿಯ ಕುತ್ತಿಗೆಗೆ ಮೂರ್ನಾಲ್ಕು ಬಾರಿ ಹಲ್ಲೆ ನಡೆಸಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಮಹಿಳೆಯ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಧರ್ಮವೀರ್‌ನನ್ನು ಬಂಧಿಸಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!