ಪಡುಬಿದ್ರಿ : ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡ್ಸಾಲು ಗ್ರಾಮ ಪಡುಬಿದ್ರಿ ಕಾಡಿಪಟ್ಣ ಬೀಚ್ ಬಳಿ ನಡೆದಿದೆ. ವಸಂತ (೩೨) ಮೃತ ಯುವಕ.
ಇವರು ಪಡುಬಿದ್ರಿಯ ಭುವನೇಂದ್ರ ಎಂಬುವರ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.
Advertisement. Scroll to continue reading.
ಶುಕ್ರವಾರ ಪ್ರಕೃತಿ ಗೆಸ್ಟ್ ಹೌಸ್ ಬಳಿ ಅರಬ್ಬೀ ಸಮುದ್ರದಲ್ಲಿ ಕೈರಂಪಣಿ ಮೀನುಗಾರಿಕೆಗೆ ಹೋಗಿ ಮೀನುಗಾರಿಕೆಗೆ ಕೆಲವು ಕೈರಂಪಣಿ ಮೀನುಗಾರರು ದೋಣಿಯಲ್ಲಿ ಸಮುದ್ರಕ್ಕೆ ಹೋಗಿ ಬಲೆ ಬೀಸಿದ್ದಾರೆ.
ಈ ವೇಳೆ ಮೀನುಗಾರಿಕೆ ನಡೆಸುತ್ತಿದ್ದ ವಸಂತ ಸಮುದ್ರದ ಅಲೆಗಳ ಹೊಡೆತಕ್ಕೆ ಆಯತಪ್ಪಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ, ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.