Connect with us

Hi, what are you looking for?

Diksoochi News

ಸಿನಿಮಾ

ಬಿಗ್ ಬಾಸ್ 10 : ಕಪಿ ಆಟಗಳ ಮೂಲಕ ತೊಂದರೆ ಕೊಡೋದನ್ನು ನಿಲ್ಲಿಸಿ: ಎಚ್ಚರಿಕೆ ನೀಡಿದ ಸಂಗೀತಾ ಕುಟುಂಬ

1

ಬಿಗ್ ಬಾಸ್ ಸೀಸನ್ 10 ಈ ಭಾರೀ ಸಕತ್ ಫೈಟಿಂಗ್‌ನಿಂದ ಕೂಡಿದೆ. ಮನೆಯೊಳಗೆ ಸಾಕಷ್ಟು ಚರ್ಚೆ, ಜಗಳ, ಮುನಿಸುಗಳು ನಡೆಯುತ್ತಲೇ ಇವೆ. ಒಬ್ಬರ ಮೇಲೊಬ್ಬರು ಕೆಸರೆರೆಚಾಟ ಮಾಡುತ್ತಲೇ ಇದ್ದಾರೆ. ಇದು ಬಿಗ್ ಬಾಸ್ ಮನೆ ಒಳಗಿನ ಕಥೆಯಾದರೆ, ಹೊರಗೇನೂ ಕಮ್ಮಿ ಇಲ್ಲ ಬಿಡಿ.

ಬಿಗ್ ಬಾಸ್ ಅಭಿಮಾನಿಗಳು ಅವರರವ ಇಷ್ಟದ ಸ್ಪರ್ಧಿಗಳ ಪೇಜ್‌ಗಳನ್ನು ಮಾಡಿಕೊಂಡು ಪ್ರೋತ್ಸಾಹ ಕೊಡುತ್ತಿದ್ದಾರೆ. ಅದಕ್ಕೆ ಭಿನ್ನ ಭಿನ್ನ ಕಮೆಂಟ್ಸ್‌ಗಳು ಬರುತ್ತಿರುತ್ತವೆ.

ಈ ನಡುವೆ ಫೇಕ್ ಅಕೌಂಟ್‌ಗಳಿಗೇನೂ ಕೊರತೆಯಿಲ್ಲ. ಈ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಕುಟುಂಬ ಹರಿಹಾಯ್ದಿದೆ. ಪ್ರತಿಸ್ಪರ್ಧಿಗಳ ಬಗ್ಗೆ ಆರೋಪ ಮಾಡುವುದರ ಬಗ್ಗೆ ಕಿಡಿ ಕಾರಿದೆ‌. ಫೇಕ್ ಅಭಿಮಾನಿ ಅಕೌಂಟ್‌ಗಳಿಂದ ತೊಂದರೆ ಆಗುತ್ತಿದೆ ಎಂದು ಸಂಗೀತಾ ಅತ್ತಿಗೆ ಸುಚಿತ್ರಾ ಸೋಶಿಯಲ್ ಮೀಡಿಯಾದಲ್ಲಿ ಬರೆದು ಎಚ್ಚರಿಕೆ ನೀಡಿದ್ದಾರೆ.

ಕಪಿ ಆಟಗಳ ಮೂಲಕ ತೊಂದರೆ :

ಫೇಕ್ ಅಕೌಂಟ್ ವಿರುದ್ಧ ಸುಚಿತ್ರಾ ಎಚ್ವರಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.

ಸಂಗೀತಾಳ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಅವಳ ಹೆಸರಿನಲ್ಲಿ fake accounts ಸೃಷ್ಟಿ ಮಾಡಿ, ಅನ್ಯ ಸ್ಪರ್ಧಿಗಳ ಮೇಲೆ ಸುಳ್ಳು ಪ್ರಚಾರಗಳನ್ನು ಮಾಡುತ್ತಾ, ಸಂಗೀತ ಹೆಸರನ್ನು ಎಳೆಯುತ್ತಾ ಸುಮ್ಮಸುಮ್ಮನೆ ನಿಮ್ಮ ಕಪಿ ಆಟಗಳ ಮೂಲಕ ತೊಂದರೆ ಕೊಡುವುದನ್ನು ನಿಲ್ಲಿಸಿ. ಸಂಗೀತಳ ಕುಟುಂಬವಾಗಿ ನಾವು ಯಾವ ಅಭ್ಯರ್ಥಿಯ ಮೇಲು ಯಾವುದೇ ಆರೋಪವನ್ನು ಅಥವಾ ಅಪಪ್ರಚಾರವನ್ನು ಮಾಡಿರುವುದಿಲ್ಲ. ಮಾಡುವುದು ಇಲ್ಲ.

ನಾವು ಸುಮ್ಮನಿದ್ದೀವಿ ಎಂದು ಅಲಕ್ಷಿಸಿದರೆ ಪರಿಣಾಮ ಸರಿಯಾಗಿರುವುದಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧೆ ಹೆಚ್ಚಾಗುತ್ತಿದೆ. ಮನಸ್ತಾಪ, ಜಗಳ ನಡೆಯುವುದೂ ಹೆಚ್ಚಾಗಿದೆ. ಸಂಗೀತಾ ಶೃಂಗೇರಿ ಪ್ರಬಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ನೆಲೆಯೂರಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!