ಕೋಲ್ಕತ್ತಾ : ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಹಿಂದುಸ್ಥಾನಿ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
55 ರ ಹರೆಯದ ಖಾನ್ ಅವರನ್ನು ವೆಂಟಿಲೇಶನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ.
ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದರಾದರೂ ಸೆರೆಬ್ರಲ್ ಅಟ್ಯಾಕ್ ನಂತರ, ಅವರ ದೇಹ ಸ್ಥಿತಿಯು ಕ್ಷೀಣಿಸಲು ಪ್ರಾರಂಭವಾಯಿತು.
ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ನಮ್ಮ ವೈದ್ಯರು ಅವರ ಮೇಲೆ ನಿರಂತರ ನಿಗಾ ಇಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬದೌ ನ್‌ನ ಸಹಸ್ವಾನ್‌ನಲ್ಲಿ ಜನಿಸಿದ ಖಾನ್ ಅವರು ಘರಾನಾ ದಿಗ್ಗಜ ಇನಾಯತ್ ಹುಸೇನ್ ಖಾನ್ ಅವರ ಮರಿಮೊಮ್ಮಗ. ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರ ಸೋದರಳಿಯ.
ಈ ಮಹಾನ್ ಸಾಧಕನಿಗೆ 2006ರಲ್ಲಿ ಪದ್ಮಶ್ರೀ ಮತ್ತು 2022 ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.