ಹಿರಿಯಡ್ಕ : ವಿದ್ಯುತ್ ಶಾಕ್‍ನಿಂದ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಹಿರಿಯಡಕದಲ್ಲಿ ನಡೆದಿದೆ. ಉಮೇಶ(29) ಮೃತ ಯುವಕ.
ಉಮೇಶ ಕಳೆದ 8 ವರ್ಷಗಳಿಂದ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಜ್ಯುನಿಯರ್ ಲೈನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದರು. ಡಿ.22 ರಂದು ಸಾರ್ವಜನಿಕರಿಂದ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ದೂರು ಬಂದ ಮೇರೆಗೆ ಪರಿಶೀಲಿಸಿದಾಗ ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಯಂಗಡಿ- ಕೈರಾಳಿ ನಾಗಬನದ ಬಳಿ ವಿದ್ಯುತ್ ಪರಿವರ್ತಕದಲ್ಲಿ ತೊಂದರೆ ಇರುವುದು ಗಮನಕ್ಕೆ ಬಂದಿದೆ.
ಹೀಗಾಗಿ ರಮೇಶ ಎಂಬವರು ಪರಿವರ್ತಕ ಹತ್ತಿ ರಿಪೇರಿ ಮಾಡಿದ್ದು, ನಂತರ ಉಮೇಶ ಪರಿವರ್ತಕದಲ್ಲಿ ಫ್ಯೂಜ್ ಹಾಕಲು ಪರಿವರ್ತಕವನ್ನು ಹತ್ತಿದಾಗ ಆಯ ತಪ್ಪಿ ಲೈನ್ ನಿಂದ ವಿದ್ಯುತ್ ಆತನ ಬಲಕೈಗೆ ಆಕಸ್ಮಿಕವಾಗಿ ಹರಿದು ಮೇಲಿನಿಂದ ತಲೆ ಕೆಳಗಾಗಿ ಬಿದ್ದಿದ್ದಾರೆ.
ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.