ಕಾರ್ಕಳ : ವರ್ಕ್ ಫ್ರಂ ಹೋಮ್ ಆಮಿಷವೊಡ್ಡಿ ಆನ್ ಲೈನ್ ಟಾಸ್ಕ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ರಜನಿ ಎಂಬವರಿಗೆ ಟ್ರೆಡಿಂಗ್ ಆಫ್ ನಿಂದ ಮನೆಯಲ್ಲಿಯೇ ಉದ್ಯೋಗ ನಡೆಸುವಂತೆ ಆರೋಪಿಗಳು ಆಸೆ ತೊರಿಸಿದ್ದಾರೆ.
ಜೊತೆಗೆ ಟ್ರೆಡಿಂಗ್ ಲಿಂಕ್ ಕಳುಹಿಸಿದ್ದಾರೆ. ಇದನ್ನು ನಂಬಿದ ರಜನಿ ಟ್ರೆಡಿಂಗ್ ಲಿಂಕ್ ನಲ್ಲಿನ ಟಾಸ್ಕ್ ನ್ನು ಪೂರ್ಣಗೊಳಿಸಿದ್ದಾರೆ. ಆ ಬಳಿಕ ಆರೋಪಿಗಳು ಹಣವನ್ನು ಗಳಿಸಲು ಬ್ಯಾಂಕ್ ಖಾತೆಯಿಂದ ಹಣವನ್ನು ಪಾವತಿಸುವಂತೆ ಬ್ಯಾಂಕ್ ಖಾತೆಗಳ ವಿವರ ನೀಡಿದ್ದಾರೆ.
Advertisement. Scroll to continue reading.
ಅಂತೆಯೇ ಅವರು ಆರೋಪಿಗಳು ಸೂಚಿಸಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ ಫೋನ್ ಪೇ ಮತ್ತು FINO PAY ಮುಖೇನ ೧,೪೩,೦೦೧ ಹಣವನ್ನು ಆನ್ ಲೈನ್ ಮುಖೇನ ಟ್ರಾನ್ಸೆಕ್ಷನ್ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಟಾಸ್ಕ್ ನಡೆಸುವ ರೀತಿಯಲ್ಲಿ ಹಣವನ್ನು ಪಡೆದು, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ರಜನಿ ನೀಡಿರುವ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.