ಮುಂಬೈ: ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದ ಮಹಿಳಾ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಈ ಚೊಚ್ಚಲ ಗೆಲುವಿನ ಮೂಲಕ ಇತಿಹಾಸವನ್ನು ಬರೆದಿದೆ.
ಪಂದ್ಯ ಗೆಲ್ಲುಲು ಭಾರತಕ್ಕೆ 75 ರನ್‌ಗಳ ಗುರಿ ನೀಡಲಾಗಿತ್ತು. ಈ ಮೊತ್ತವನ್ನು ಭಾರತ ಮಹಿಳಾ ತಂಡವು 19ನೇ ಓವರ್‌ನಲ್ಲಿ ಸಾಧಿಸಿ ಐತಿಹಾಸಿಕ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 219 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 261 ರನ್ ಗಳಿಸಿತು.
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂದಾನ 38 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೇ ಜೆಮಿಮಾ ರಾಡ್ರಿಗಸ್ 12 ರನ್ ಗಳಿಸಿದರು.
ಭಾರತೀಯ ಬೌಲರ್‌ಗಳು ಬೆಳಿಗ್ಗೆ 28 ರನ್‌ಗಳಿಗೆ ಐದು ಆಸ್ಟ್ರೇಲಿಯಾದ ವಿಕೆಟ್‌ಗಳನ್ನು ಕಬಳಿಸಿದರು, ಇದರಿಂದಾಗಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 261 ರನ್‌ಗಳಿಸಲಷ್ಟೇ ಶಕ್ಯವಾಯಿತು. 75 ರನ್‌ಗಳ ಗುರಿಯನ್ನು ಪಡೆದ ಭಾರತ, 19ನೇ ಓವರ್‌ನಲ್ಲಿ ಎರಡು ವಿಕೆಟ್‌ಗೆ 75 ರನ್ ಗಳಿಸುವ ಮೂಲಕ ಅದನ್ನು ಸಾಧಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 38 ರನ್ ಗಳಿಸಿ ಅಜೇಯರಾಗಿ ಉಳಿದರು. ಜೆಮಿಮಾ ರಾಡ್ರಿಗಸ್ ಕೂಡ 12 ರನ್ ಗಳಿಸಿ ಅಜೇಯರಾಗಿ ಉಳಿದರು.
ಇತಿಹಾಸ ನಿರ್ಮಾಣ :
ಭಾರತ ಮಹಿಳಾ ತಂಡವು 1995ರ ನಂತರ ಮೊದಲ ಬಾರಿಗೆ ತವರು ನೆಲದಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಸಂಪೂರ್ಣ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ತಂಡವು ಯಶಸ್ವಿಯಾಗಿದ್ದು, ಈ ಹಿಂದೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಭಾರತವು ಇಂಗ್ಲೆಂಡ್ ಮಹಿಳಾ ತಂಡವನ್ನು 347 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು.
ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಗಳ ವಿಷಯದಲ್ಲಿ ಇಂಗ್ಲೆಂಡ್ ವಿರುದ್ಧ ಯಾವುದೇ ತಂಡವು ಗಳಿಸಿದ ಅತಿದೊಡ್ಡ ಗೆಲುವಾಗಿದೆ. ಇದು ಆಸ್ಟ್ರೇಲಿಯಾ ವಿರುದ್ಧ 11 ಟೆಸ್ಟ್‌ಗಳಲ್ಲಿ ಭಾರತಕ್ಕೆ ಮೊದಲ ಜಯವಾಗಿದೆ.
ಭಾರತ ಮಹಿಳಾ ತಂಡ ಇದುವರೆಗೆ 40 ಟೆಸ್ಟ್‌ಗಳಲ್ಲಿ ಏಳು ಗೆಲುವು ದಾಖಲಿಸಿದ್ದು, ಆರು ಪಂದ್ಯಗಳಲ್ಲಿ ಸೋತಿದೆ. ತಂಡದ 27 ಪಂದ್ಯಗಳು ಡ್ರಾ ಆಗಿವೆ.