ಪೂಂಚ್ : ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ಬಳಿಕ ಭಾರತೀಯ ಸೇನೆಯು ನ್ಯಾಯಾಲಯದ ವಿಚಾರಣೆ ತನಿಖೆಗೆ ಆದೇಶಿಸಿದೆ.
ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ಭದ್ರತಾ ಪಡೆಗಳು ವಿಚಾರಣೆ ನಡೆಸುತ್ತಿದ್ದಾಗ ಮೂವರು ನಾಗರಿಕರು ಸಾವನ್ನಪ್ಪಿದ್ದರು. ಈ ಬಗ್ಗೆ ತನಿಖೆಗೆ ಸೇನೆ ಆದೇಶಿಸಿದೆ. ಈ ನಡುವೆ ಪೂಂಚ್-ರಜೌರಿ ಸೆಕ್ಟರ್‌ನಲ್ಲಿ ಭಯೋತ್ಪಾದಕ ದಾಳಿಯ ನಡುವೆ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸೋಮವಾರ ಜಮ್ಮು ತಲುಪಿದ್ದಾರೆ. ಅವರು ಪೂಂಚ್-ರಜೌರಿ ವಲಯದ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ಮೂವರು ನಾಗರಿಕರ ಸಾವು ಮತ್ತು ಇತರ ಐವರಿಗೆ ಗಾಯಕ್ಕೆ ಸಂಬAಧಿಸಿದAತೆ ಕೊಲೆ ಯತ್ನಕ್ಕೆ ಸಂಬAಧಿಸಿದAತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪೂಂಚ್‌ನ ಸುರನ್‌ಕೋಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವಿಚಾರಣೆಗೆ ಎಂಟು ನಾಗರಿಕರನ್ನು ಕರೆದೊಯ್ದಿದ್ದು, ಮೂವರು ಶವವಾಗಿ ಪತ್ತೆಯಾಗಿದ್ದು. ಶುಕ್ರವಾರ ಬೆಳಗ್ಗೆ ಹೊಂಚು ದಾಳಿ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ವಿಚಾರಣೆಗಾಗಿ ಭದ್ರತಾ ಪಡೆಗಳು ಕರೆದೊಯ್ದ ಎಂಟು ನಾಗರಿಕರಲ್ಲಿ ಮೂವರು ರಾತ್ರೋರಾತ್ರಿ ಶವವಾಗಿ ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಉಳಿದ ಐವರು ನಾಗರಿಕರನ್ನು ಗಾಯಗೊಂಡ ಸ್ಥಿತಿಯಲ್ಲಿ ರಜೌರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆ ವೇಳೆ ಎಂಟು ಮಂದಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಅವರ ಸಂಬAಧಿಕರು ಆರೋಪಿಸಿದ್ದಾರೆ.