ಮಂಗಳೂರು: ಬಹು ಮಹಡಿ ಕಟ್ಟಡದ ನಾಲ್ಕನೇ ಮಾಳಿಗೆಯ ಫ್ಲ್ಯಾಟ್‌ವೊಂದರ ಕೋಣೆಯೊಳಗೆ ಬಾಕಿಯಾಗಿದ್ದ ಮಗುವನ್ನು ಅಗ್ನಿಶಾಮಕ ಠಾಣೆಯ ಸಿಬಂದಿ ರಕ್ಷಣೆ ಮಾಡಿರುವ ಘಟನೆ ಕೊಡಿಯಾಲ್‌ಗುತ್ತುವಿನಲ್ಲಿ ನಡೆದಿದೆ.
ನಾಲ್ಕನೇ ಮಹಡಿಯ ಫ್ಲ್ಯಾಟ್‌ನ ಕೋಣೆಯೊಳಗೆ ಇದ್ದ ಸುಮಾರು 3 ವರ್ಷದ ಮಗು ಆಟವಾಡುತ್ತಾ ಒಳಗಿನಿಂದ ಬಾಗಿಲಿನ ಚಿಲಕವನ್ನು ಹಾಕಿಕೊಂಡಿದೆ. ಬಳಿಕ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ.
ಮಗು ಕೋಣೆಯೊಳಗೆ ಬಾಕಿಯಾಗಿ ಮನೆಯವರು ಗಾಬರಿಯಾಗಿದ್ದರು. ಬಳಿಕ ಮಗುವಿನ ರಕ್ಷಣೆಗಾಗಿ ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು.
Advertisement. Scroll to continue reading.
ಅಗ್ನಿ ಶಾಮಕ ಠಾಣೆಯ ಅಧಿಕಾರಿ ರಾಜಾ ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಹಗ್ಗದ ಸಹಾಯದಿಂದ ನಾಲ್ಕನೇ ಮಹಡಿಯ ಮೇಲಿನಿಂದ ಮಗುವಿದ್ದ ಕೋಣೆಯ ಒಳಗೆ ಹೋಗಿ ಮಗುವನ್ನು ರಕ್ಷಿಸಲಾಯಿತು.
In this article:child rescue, Featured, fire emergency, kodiyalguttu, mangalore, ಮಂಗಳೂರು, ಮಗು ರಕ್ಷಣೆ
Click to comment