ಬಿಗ್ ಬಾಸ್ ಸೀಸನ್ 10 ದಿನ ನಿತ್ಯ ಗಲಾಟೆ, ಜಗಳ, ಗುಸು ಗುಸು, ಪಿಸು ಪಿಸುಗಳಿಂದ ಸದ್ದು ಮಾಡುತ್ತಿದೆ. ಗ್ರೂಪಿಸಂ ಕೂಡ ಕಂಡು ಬರುತ್ತಿದೆ. ವೀಕೆಂಡ್ ಬಂದ್ರೆ ಕಿಚ್ಚ ಸುದೀಪ ಎಲ್ಲರಿಗೂ ಕ್ಲಾಸ್ ತೆಗೆದುಕೊಳ್ಳುತ್ತಾರೆ.
ವಾದ ವಿವಾದಗಳನ್ನು ಆಲಿಸಿ ಜಡ್ಜ್ಮೆಂಟ್ ಕೊಡುತ್ತಾರೆ.
ಕಳೆದ ವಾರ ವೀಕೆಂಡ್ನಲ್ಲಿ ಕಿಚ್ಚನ ದರ್ಶನವಾಗಿರಲಿಲ್ಲ.
ಬದಲಿಗೆ ‘ ಬಿಗ್ ಬಾಸ್ ನ್ಯಾಯಾಲಯ’ ಎಂಬ ಕಾನ್ಸೆಪ್ಟ್ನಲ್ಲಿ ನಟಿ ಶ್ರುತಿ ನ್ಯಾಯಾಧೀಶೆಯಾಗಿ ಎಂಟ್ರಿ ಕೊಟ್ಟಿದ್ದರು.
ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಬಳಕೆ ಮಾಡಲಾಗುತ್ತಿದೆ ಎಂಬ ಫೋಟೋವೊಂದು ವೈರಲ್ ಆಗಿತ್ತು. ಈ ಬಗ್ಗೆ ಒಳ ಹೋದ ಶ್ರುತಿ ಸ್ಪರ್ಧಿಗಳಿಂದಲೇ ಸ್ಪಷ್ಟನೆ ಕೊಡಿಸಿದ್ದರು.
ಫೋಟೋದಲ್ಲಿ ವೈರಲ್ ಆದಂತೆ ಅದು ಮೊಬೈಲ್ ಚಾರ್ಜರ್ ಅಲ್ಲ, ಬದಲಿಗೆ ಟ್ರಿಮ್ಮರ್ ಚಾರ್ಜರ್ ಎಂಬುದು ತಿಳಿದುಬಂದಿತ್ತು.
ಆಮೇಲೆ ಹರಟೆ, ನಗು, ಸಮಾಧಾನ, ನ್ಯಾಯ ಪಂಚಾಯತಿ ನಡೆಸಿ, ಸಂಗೀತಾಗೊಂದು ಹಾಡು ಹೇಳಿ ಹೊರಬಂದಿದ್ದರು ಶ್ರುತಿ.
ಈ ವಾರ ‘ಲೀಲಾ’ ಎಂಟ್ರಿ :
ಹೌದು, ಈ ವಾರ ವೀಕೆಂಡ್ ಸ್ಪೆಷಲ್. ಯಾಕೆಂದರೆ, ಕಾಂತಾರ ಬೆಡಗಿ ಲೀಲಾ ಅಲಿಯಾಸ್ ಸಪ್ತಮಿ ಗೌಡ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಾರೆ. ಸ್ಪರ್ಧಿಯಾಗಿ ಅಲ್ಲ ಬದಲಿಗೆ ಸರ್ಕಾರಿ ಯೋಜನೆಯೊಂದರ ರಾಯಭಾರಿಯಾಗಿ.
ಶುಚಿ : ನನ್ನ ಮೈತ್ರಿ; ಮುಟ್ಟಿನ ಕಪ್ ಯೋಜನೆಯ ರಾಯಭಾರಿಯಾಗಿರುವ ಸಪ್ತಮಿ ಗೌಡ. ಈ ಕುರಿತು ಅರಿವು ಮೂಡಿಸುವ ಸಲುವಾಗಿ ಬಿಗ್ ಬಾಸ್ಗೆ ಪ್ರವೇಶಿಸಿದ್ದಾರೆ.
80% ರಷ್ಟು ಹೆಣ್ಣು ಮಕ್ಕಳು ಮುಟ್ಟಿನ ಕಪ್ ಬಳಸುತ್ತಿದ್ದು, ಹೆಣ್ಣು ಮಕ್ಕಳನ್ನು ಪ್ಯಾಡ್ನಿಂದ ಮೆನ್ಸ್ಟ್ರುವೆಲ್ ಕಪ್ಗೆ ಕರೆದು ತರುವ ಉದ್ದೇಶ ಇದೆ. ಇಲ್ಲಿಯೂ ಹೆಣ್ಣುಮಕ್ಕಳಿದ್ದೀರಿ. ನಿಮಗೆ ಸರ್ಕಾರದ ಕಡೆಯಿಂದ ಕಪ್ ನೀಡುತ್ತಿದ್ದೇನೆ ಎಂದು ಬಿಗ್ ಬಾಸ್ ನಲ್ಲಿರುವ ಮಹಿಳಾ ಸ್ಪರ್ಧಿಗಳಿಗೆ ಮುಟ್ಟಿನ ಕಪ್ ವಿತರಿಸಿದ್ದಾರೆ.