ಚಂದನವನ : ಕನ್ನಡ ಚಿತ್ರರಂಗದ ಮುದ್ದಾದ ನಟಿ ಅದಿತಿ ಪ್ರಭುದೇವ ಹೊಸ ವರ್ಷಕ್ಕೆ ಖುಷಿ ಸುದ್ದಿಯನ್ನು ಕೊಟ್ಟಿದ್ದಾರೆ. 2024ರ ಮೊದಲ ದಿನವೇ ನಟಿ ಅಭಿಮಾನಿಗಳೊಂದಿಗೆ ಖುಷಿಯ ವಿಚಾರ ಹಂಚಿಕೊಂಡಿದ್ದಾರೆ.
2024 ಕ್ಕೆ ನಾನು ‘ಅಮ್ಮ’ ಎಂದು ಹೇಳುವ ಮೂಲಕ ನಟಿ ಅದಿತಿ ಪ್ರಭುದೇವ ತಾಯಿಯಾಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ತಮ್ಮ ಮೆಟರ್ನಿಟಿ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಅದಿತಿ ಪ್ರಭುದೇವ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅದಿತಿ, ಪತಿ ಯಶಸ್ ಚಂದ್ರಕಾಂತ್ ಪಟ್ಲಾ ಹಾಗೂ ತಮ್ಮ ಪ್ರೀತಿಯ ನಾಯಿ ಚಾಕಲೇಟ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
‘ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ ಅಮ್ಮ. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ಅಮ್ಮ. 2024 ಕ್ಕೆ ನಾನು ಅಮ್ಮ’ ಎಂದು ಅದಿತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ನಟಿ ಅದಿತಿ ಪ್ರಭುದೇವ ಉದ್ಯಮಿ ಯಶಸ್ ಚಂದ್ರಕಾಂತ್ ಪಟ್ಲಾ ಅವರನ್ನು 2022ರಲ್ಲಿ ವಿವಾಹವಾದರು. ಯೂಟ್ಯೂಬ್ ಚಾನೆಲ್ ಮೂಲಕವೂ ಜನರನ್ನು ತಲುಪುತ್ತಿದ್ದಾರೆ.