ಮೈಸೂರು : ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಈ ಸಂಭ್ರಮ ಇಮ್ಮಡಿಯಾಗುವಂತಹ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ರಾಮಲಲ್ಲಾ ವಿಗ್ರಹ ಆಯ್ಕೆ ಬಗ್ಗೆ ರಾಮಮಂದಿರ ಟ್ರಸ್ಟ್ ಮಾಹಿತಿ ನೀಡಿದೆ.
ರಾಮಲಲ್ಲಾ ವಿಗ್ರಹಕ್ಕೆ ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಕಲ್ಲು ಬಳಕೆ ಮಾಡಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಜನವರಿ 22ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ, ರಾಜಸ್ಥಾನದಿಂದ ತಂದ ಶಿಲೆಗಳಲ್ಲಿ ರಾಜಸ್ಥಾನ ಶಿಲ್ಪಿಗಳು ಮತ್ತು ಕರ್ನಾಟಕದ ಇಬ್ಬರು ಶಿಲ್ಪಿಗಳಿಂದ ಬಾಲರಾಮನ ವಿಗ್ರಹ ಕೆತ್ತನೆ ಮಾಡಲಾಗಿದೆ.
ಕರ್ನಾಟಕದ ಅರುಣ್ ಯೋಗಿರಾಜ್, ಗಣೇಶ್ ಭಟ್ರಿಂದ ವಿಗ್ರಹ ಕೆತ್ತನೆ ಮಾಡಿದ್ದು, ಅಂತಿಮವಾಗಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹ ಆಯ್ಕೆ ಮಾಡಲಾಗಿದೆ.
ಅರುಣ್ ಕುರಿತು…
ಅರುಣ್ ಎಂಬಿಎ ಪದವೀಧರರಾಗಿದ್ದು, ಶಿಲ್ಪಕಲೆಯನ್ನೇ ಕುಲಕಸಬಾಗಿಸಿಕೊಂಡಿರುವ ಕುಟುಂಬ ಅವರದು. 40 ವರ್ಷದ ಅರುಣ್ 2008ರಲ್ಲಿ ಪ್ರತಿಮೆಗಳನ್ನು ಕೆತ್ತುವ ಕೆಲಸವನ್ನು ಆರಂಭಿಸಿದ್ದಾರೆ.