Connect with us

Hi, what are you looking for?

Diksoochi News

ಸಿನಿಮಾ

UI ಹೊಸ ಅಪ್ಡೇಟ್ : ಮತ್ತೆ ತಲೆಗೆ ಹುಳ ಬಿಟ್ರು ಉಪ್ಪಿ!

1

ಚಂದನವನ : ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾನೇ ಒಂಥರಾ ವಿಭಿನ್ನವಾಗಿರುತ್ತದೆ. ಅವರ ಸಿನಿಮಾ ಅಂದ್ರೆ ಸಾಕು ಎಲ್ಲರೂ ಏನೋ ಇರಬಹುದು ಡಿಫರೆಂಟ್ ಅಂದ್ಕೊಂಡ್ ಕಾಯೋರೇ ಹೆಚ್ಚು. ಅದರಲ್ಲೂ ಅವರ ನಿರ್ದೇಶನ ಅಂದ್ರೆ ಕೇಳ್ಬೇಕಾ? ಹೇಳಿ ಕೇಳಿ ತಲೆಗೆ ಹುಳ ಬಿಡುವುದರಲ್ಲಿ ಉಪ್ಪಿ ನಿಸ್ಸೀಮರು. ಇದೀಗ ಮತ್ತೆ ಹುಳ ಬಿಡೋ ಕೆಲಸ ಮಾಡಿದ್ದಾರೆ. ಅದೂ ಟೀಸರ್ ಮೂಲಕ.
ನಿಮಗೆಲ್ಲಾ ಗೊತ್ತಿರುವಂತೆ ಉಪ್ಪಿ ‘ಯುಐ’ ಚಿತ್ರವನ್ನು ತರುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ವರುಷಕ್ಕೆ ಹೊಸ ಅಪ್ಡೇಟ್‌ ಕೊಡ್ತೀನಿ ಅಂದಿದ್ದ ಉಪ್ಪಿ, ಹೊಸ ಕೆಲಸ ಕೊಟ್‌ಬಿಟ್ಟಿದ್ದಾರೆ.

ಪಾಸ್ ಬೇಕೋ…ಉತ್ತರ ಕೊಡಿ…

Advertisement. Scroll to continue reading.

ಹೌದು, ಉಪ್ಪಿ ಬಿಟ್ಟಿರೋ ಹೊಸ ಹುಳ ‘ಯುಐ’ ಚಿತ್ರದ ಬಗ್ಗೆನೇ…ಮೂರು ತಿಂಗಳ ಹಿಂದೆ ಪುಟ್ಟ ಟೀಸರ್ ರಿಲೀಸ್ ಮಾಡಿ ‘ಕತ್ತಲೆ’ ತೋರಿಸಿದ್ದ ಉಪ್ಪಿ ಈ ಭಾರೀ ಡೇಟ್ ಹೇಳಿ ಅಂತಿದ್ದಾರೆ.

ಇಂದು ರಿಲೀಸ್ ಮಾಡಿರೋ ವಿಡಿಯೋದಲ್ಲಿ ಓಡುತ್ತಿರುವ ಕುದುರೆ, ಕುದುರೆ ಕಾಲಿನ ಲಾಳದಿಂದ ಹೊರಬರುವ ಬೆಂಕಿ, ಬಳಿಕ ದಿನಾಂಕವೊಂದು ರಿವೀಲ್ ಆಗುತ್ತದೆ. ಅಲ್ಲಿ ದಿನಾಂಕ ಬಿಟ್ಟು, ತಿಂಗಳು ಮತ್ತು ವರ್ಷವನ್ನು ಹಾಕಿದ್ದಾರೆ. ದಿನಾಂಕ ಗುರುತಿಸಿ, ಈವೆಂಟ್‌ನಲ್ಲಿ ಭಾಗಿಯಾಗಲು ಪಾಸ್ ಪಡೆಯಿರಿ ಎಂದಿದ್ದಾರೆ.

ಆ ದಿನಾಂಕ ಯಾವುದು? ಫಸ್ಟ್ ಲುಕ್ ರಿಲೀಸ್ ಆಗುವ ದಿನವೇ? ಸಿನಿಮಾ ರಿಲೀಸ್ ಆಗುವ ದಿನಾಂಕವೇ? ಹೇಳಿದ್ವಲಾ…ಉಪ್ಪಿ ತಲೆಗೆ ಹುಳ ಬಿಟ್ಟಿದ್ದಾರೆ. ದಿನಾಂಕ ಡಿಕೋಡ್ ಮಾಡಿ ಎಂದಷ್ಟೇ ಹೇಳಿದ್ದಾರೆ… ಮತ್ತೆಲ್ಲಾ ಸಸ್ಪೆನ್ಸ್.

ಅಂದಹಾಗೆ, ಉಪ್ಪಿ ‘ಯುಐ’ಗೆ ಲಹರಿ ಆಡಿಯೋ ಸಂಸ್ಥೆ ಮಾಲೀಕರ ಮಗ ಮನೋಹರ್ ನಾಯ್ಡು ಮಕ್ಕಳಾದ ಚಂದ್ರು, ನವೀನ್ ಹಾಗೂ ಸಲಗ ಕೆ.ಪಿ.ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ…ಇನ್ನುಳಿದ ಅಪ್ಡೇಟ್ಸ್ ಉಪ್ಪಿ ಸ್ಟೈಲ್‌ನಲ್ಲೇ ಮುಂದೆ ಸಿಗುತ್ತೆ ಬಿಡಿ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!