ಮಣಿಪಾಲ : ಬ್ಯಾಂಕ್ ವಿವರ ಪಡೆದು ಲಕ್ಷಾಂತರ ರೂ. ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ರವೀಂದ್ರನ್(೬೨) ಎಂಬವರ ಸಹೋದರನಿಗೆ ತಮ್ಮ ತಾಯಿಯ ಲೈಫ್ ಸರ್ಟಿಫಿಕೇಟ್ ಬ್ಯಾಂಕ್ ನಲ್ಲಿ ಅಪ್ಡೇಟ್ ಆಗಲಿಲ್ಲ ಎಂಬುದಾಗಿ ಪೋಸ್ಟ್ ಬಂದಿದೆ.
ಅದನ್ನು ಅವರು ರವೀಂದ್ರನ್ ಅವರಿಗೆ ವಾಟ್ಸ್ ಆಪ್ ಮೂಲಕ ಕಳುಹಿಸಿದ್ದರು. ಹೀಗಾಗಿ ರವೀಂದ್ರನ್ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಗೆ ಕಾಲ್ ಮಾಡಿದಾಗ ಕಾಲ್ ರಿಸೀವ್ ಮಾಡಲಿಲ್ಲ.
ನಂತರ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಹೆಸರು ಹೇಳಿ ಅಪರಿಚಿತ ವ್ಯಕ್ತಿಯಿಂದ ಕಾಲ್ ಬಂದಿದೆ. ಅದರಲ್ಲಿ ಆತ ತಾನು ಕೆನರಾ ಬ್ಯಾಂಕ್‌ನ ನೌಕರ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ.
ತಾಯಿಯ ಲೈಫ್ ಸರ್ಟಿಫಿಕೇಟ್ ಅಪ್ಡೇಟ್ ಮಾಡಲು ವ್ಯಾಟ್ಸಾಪ್‌ನಿಂದ ಲಿಂಕ್ ಕಳಿಸಿದ್ದಾನೆ ಎನ್ನಲಾಗಿದೆ.
ಅಪರಿಚಿತ ವ್ಯಕ್ತಿ ಹೇಳಿದಂತೆ ಅವರು ತಮ್ಮ ಮೊಬೈಲ್ ನಲ್ಲಿ ಆಧಾರ್ ನಂಬರ್, ಬ್ಯಾಂಕ್ ಪಾಸ್ ವರ್ಡ್ ಹಾಗೂ ಬ್ಯಾಂಕ್ ಡಿಟೇಲ್ ನ್ನು ಹಾಕಿದ್ದಾರೆ.
ಬಳಿಕ ಮೊಬೈಲ್‌ಗೆ ಓ ಟಿ ಪಿ ಬರುತ್ತಾ ಇದ್ದು ಜೊತೆಗೆ ಮೊದಲು ೯೯,೯೯೯/- ಎರಡನೇ ಸಲ ೯೯,೯೯೦/- ಮೂರನೇ ಸಲ ೫೦,೦೦೦/- ಹಣ ಡ್ರಾ ಆಗಿ ಅಪರಿಚಿತ ವ್ಯಕ್ತಿ ಆತನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.