Connect with us

Hi, what are you looking for?

Diksoochi News

ಕರಾವಳಿ

ಹಿರಿಯಡ್ಕ : ಅಪರಿಚಿತ ವಾಹನ ಡಿಕ್ಕಿ; ಪಾದಚಾರಿ ಸಾವು

1

ಹಿರಿಯಡ್ಕ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿರುವ ಘಟನೆ ಅಂಜಾರು ಗ್ರಾಮದ ಶೇಡಿಗುರಿ ಎಂಬಲ್ಲಿ ನಡೆದಿದೆ. ಅಂಜಾರು ಬಜೆ ನಿವಾಸಿ ನಾರಾಯಣ(೬೫) ಮೃತ ವ್ಯಕ್ತಿ.

ನಾರಾಯಣ ಅವರು ಹಿರಿಯಡಕ ಪೇಟೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಸಂದರ್ಭ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

ಪರಿಣಾಮ ರಸ್ತೆಗೆ ಬಿದ್ದ ಅವರ ಮೇಲೆ ವಾಹನ ಹರಿದಿದೆ. ಇದರಿಂದ ಅವರ ತಲೆ ನುಜ್ಜಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement. Scroll to continue reading.

ಅಪಘಾತ ಪಡಿಸಿದ ವಾಹನ ಚಾಲಕ ವಾಹನ ನಿಲ್ಲಿಸದೆಯೇ ಪರಾರಿಯಾಗಿದ್ದಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!