ಉಡುಪಿ : ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರು ಸೋಮವಾರ(ಜ.೧) ರಾತ್ರಿ ಕೋಟೇಶ್ವದ ಡಾಕ್ಟರ್ ಎನ್ ಆರ್ ಆಚಾರ್ಯ ಸ್ಮಾರಕ ಆಸ್ಪತ್ರೆಯಲ್ಲಿ ಇಹಲೋಹ ತ್ಯಜಿಸಿದ್ದಾರೆ.
ಪಯಣ, ಪಲಾಯನ, ಪರಿಭ್ರಮಣ,ಪದರಗಳು, (ಕಾದಂಬರಿಗಳ), ಸಾತತ್ತೆಗೊಂದು ಸನ್ಮಾನ,ಸೆಕ್ರೆಟರ ಸಾಹೇಬರ ಹೆಂಡತಿ ಮತ್ತು ಇತರ ಕಥೆಗಳು ಹಾಗೂ ಅಸ್ತಮಾ ಕೊಂಕಣಿ ಕಾದಂಬರಿ ಸೇರಿದಂತೆ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.
ಅತ್ಯುತ್ತಮ ಸಂಘಟಕರು, ಅಂಕಣ ಬರೆಹಗಾರರಾಗಿದ್ದರು. ಹತ್ತು ವರ್ಷಗಳ ಕಾಲ ಚಡಗ ಕಾದಂಬರಿ ಪ್ರಶಸ್ತಿ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.
ಸಾಹಿತ್ಯ , ಸಂಘಟನೆ, ಪತ್ರಿಕೋದ್ಯಮ ಈ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯವಾದುದು. ಇವರ ನಿಧನ ಸಾಂಸ್ಕೃತಿಕ ಕ್ಷೇತ್ರ ಕ್ಕೆ ತುಂಬಲಾರದ ನಷ್ಟವೆಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಡಾ.ಎನ್. ಭಾಸ್ಕರಾಚಾರ್ಯ ಮೊದಲಾದವರು ಸಂತಾಪ ಸೂಚಿಸಿದ್ದಾರೆ.
ಶಾರದಾ ಭಟ್ ಅವರ ಇಚ್ಛೆಯಂತೆ ಅವರ ದೇಹವನ್ನು ಸಂಶೋಧನೆಗಾಗಿ ಮಣಿಪಾಲ ಆಸ್ಪತ್ರೆಗೆ ನೀಡಲಾಗಿದೆ.