Connect with us

Hi, what are you looking for?

Uncategorized

ಉದ್ಯಾವರ: ಏಳನೇ ಶತಮಾನದ ಆಳುಪರ ಕಾಲದ ಶಾಸನ ಪತ್ತೆ

0

ಉಡುಪಿ‌ : ರಸ್ತೆ ಅಗಲೀಕರಣದ ವೇಳೆ ಉಡುಪಿ‌ ಜಿಲ್ಲೆಯ ಉದ್ಯಾವರದ ಕಲ್ಸಂಕ ಎಂಬಲ್ಲಿ ಶಾಸನವೊಂದು ಪತ್ತೆಯಾಗಿದೆ. ನಾರಾಯಣ ಪೂಜಾರಿಯವರ ಜಾಗದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಶಾಸನ ಪತ್ತೆಯಾಗಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು-ಹೆಜಮಾಡಿಯ ದೈಹಿಕ ಶಿಕ್ಷಕರಾದ ಅಲ್ವಿನ್ ಅಂದ್ರಾದೆ ಶಾಸನವನ್ನು ಪತ್ತೆ ಮಾಡಿದ್ದಾರೆ.
ಈ ಶಾಸನವನ್ನು ಪರಿಶೀಲಿಸಿದ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ , ಇದು ೭ನೇ ಶತಮಾನದ ಆಳುಪರ ಶಾಸನವಾಗಿದ್ದು,
ಅಗ್ನಿ ಶಿಲೆ (Volcanic Rock) ಯಿಂದ ಕೊರೆಯಲ್ಪಟ್ಟ ‌ಈ ಶಾಸನವು 3 ಅಡಿ ಎತ್ತರವನ್ನು ‌ಹೊಂದಿದ್ದು,‌ ಶಿಲೆಯ ಎರಡು ಭಾಗದಲ್ಲಿ‌ ಶಾಸನವನ್ನು ಬರೆಯಲಾಗಿದೆ‌. ಶಾಸನದ ಒಂದು ಮಗ್ಗುಲಲ್ಲಿ 5 ಸಾಲುಗಳಿದ್ದು, ಇನ್ನೊಂದು‌ ಮಗ್ಗುಲಲ್ಲಿ 6 ಸಾಲುಗಳಿವೆ‌. ೭ನೇ ಶತಮಾನದ ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನದ ಹೆಚ್ಚಿನ ಅಕ್ಷರಗಳು‌ ತೃಟಿತಗೊಂಡಿದ್ದು, ಕೊನೆಯಲ್ಲಿ ನಿರಿದ ಕಲ್ಲು ಎಂಬ ಉಲ್ಲೇಖವಿದೆ. ಹಾಗಾಗಿ ಈ‌ ಶಾಸನವನ್ನು ಯಾವುದೋ ಘಟನೆಯ‌ ನೆನಪಿಗಾಗಿ‌ ಹಾಕಿರಬಹುದೆಂದು ಮತ್ತು
ಈ ಶಾಸನದ ಹೆಚ್ಚಿನ ಅಧ್ಯಯನವನ್ನು ಮಾಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್‌ ರಾಜ್ ಸರಳಬೆಟ್ಟು‌ ಹಾಗೂ ಮಂಜುನಾಥ ಆಚಾರ್ಯ ಪಳ್ಳಿ ಮತ್ತು ಸ್ಥಳೀಯರು ಶಾಸನದ ಶೋಧನೆಗೆ ಸಹಕಾರ ನೀಡಿದರು.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

2 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!