ಬೆಂಗಳೂರು : ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ವೊಂದರಲ್ಲಿ ಶವ ಇರಿಸಿ ಮೇಲೆ ಬಟ್ಟೆಗಳನ್ನಿಟ್ಟು ಮುಚ್ಚಳ ಹಾಕಿ ಟೇಪ್‌ನಿಂದ ಸುತ್ತಲಾಗಿದೆ.
ದುರ್ವಾಸನೆ ಬರಲಾರಂಭಿಸಿದ್ದರಿಂದ ಸ್ವಚ್ಛತಾ ಸಿಬ್ಬಂದಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ 25 ರಿಂದ 30 ವರ್ಷ ವಯಸ್ಸಿನ ವಿವಾಹಿತ ಮಹಿಳೆಯ ಶವ ಇರುವುದು ಪತ್ತೆಯಾಗಿದೆ.
ಕೊಲೆ ಮಾಡಿ ಮೃತದೇಹವನ್ನು ಮುಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೇ ಪೊಲೀಸರು, ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.
Advertisement. Scroll to continue reading.

In this article:bengaluru, Diksoochi news, diksoochi Tv, yashwanthpura railway station, ಡ್ರಮ್‌ನಲ್ಲಿ ಶವ, ಬೆಂಗಳೂರು

Click to comment