ಇರಾನ್ : 2020 ರಲ್ಲಿ ಯುಎಸ್ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್‌ನ ಪ್ರಮುಖ ಜನರಲ್ ಖಾಸಿಂ ಸುಲೈಮಾನಿಯನ್ನು ಗೌರವಿಸಲು ನಡೆದ ಕಾರ್ಯಕ್ರಮದ ವೇಳೆ ಅವಳಿ ಸ್ಫೋಟ ಸಂಭವಿಸಿದೆ.
ಅವರ ಸಮಾಧಿ ಬಳಿ ಎರಡು ಪ್ರಬಲ ಬಾಂಬ್ ಸ್ಫೋಟಗಳಿಂದ ಸುಮಾರು 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಖಾಸಿಂ ಸೊಲೈಮಾನಿ ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳ ಸರ್ವೋಚ್ಚ ಕಮಾಂಡರ್ ಆಗಿದ್ದರು. ಜನವರಿ 3, 2020 ರಂದು, ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ಯುಎಸ್ ಡ್ರೋನ್ ದಾಳಿಯಲ್ಲಿ ಸೊಲೈಮಾನಿ ಹತ್ಯೆಗೀಡಾಗಿದ್ದರು.
ಮಂಗಳವಾರ ಕೆರ್ಮಾನ್ ನಗರದಲ್ಲಿ ಖಾಸಿಂ ಸೊಲೈಮಾನಿ ಸಮಾಧಿ ಬಳಿ 4ನೇ ಹುತಾತ್ಮ ದಿನಾಚರಣೆಯ ಮೆರವಣಿಗೆಯ ವೇಳೆ ಈ ಎರಡು ಬಾಂಬ್ ಸ್ಫೋಟಗಳ ಸಂಭವಿಸಿದೆ. ಇದರಿಂದ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಬ್ರಾಡ್ಕಾಸ್ಟರ್ ಐರಿಬ್ ವರದಿ ಮಾಡಿವೆ. ಎರಡೂ ಸ್ಫೋಟಗಳು ಭಯೋತ್ಪಾದನಾ ಕೃತ್ಯಗಳಾಗಿವೆ ಎಂದು ಕೆರ್ಮನ್ ಪ್ರಾಂತ್ಯದ ಸ್ಥಳೀಯ ಅಧಿಕಾರಿಯನ್ನು ಉಲ್ಲೇಖಿಸಿ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ.