ಮಲ್ಪೆ : ಧಕ್ಕೆಯ ನೀರಿಗೆ ಬಿದ್ದು ವ್ಯಕ್ತಿ ನಾಪತ್ತೆಯಾಗಿದ್ದ ಮೀನುಗಾರನ ಶವ ಸಿವಾಕ್ ವೇ ನ ಹತ್ತಿರ ಪಾಪನಾಶಿನಿ ನದಿಯಲ್ಲಿ ಪತ್ತೆಯಾಗಿದೆ. ತಮಿಳುನಾಡು ಮೂಲದ ಮುರುಗೇಸನ್(೫೮) ಮೃತ ಮೀನುಗಾರ.
ಮುರುಗೇಸನ್ ಮಲ್ಪೆ ಬಂದರಿನಲ್ಲಿ ಸುದರ್ಶನ ಎಂಬವರ ಮಾಲಿಕತ್ವದ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಜ.೧ ರಂದು ರಜೆ ಇದ್ದ ಕಾರಣ ಬಲೆ ಕಟ್ಟುವ ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ತೊಡಗಿಕೊಂಡಿದ್ದರು.
ಈ ವೇಳೆ ಚಾ ಕುಡಿಯಲು ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಬೋಟಿನ ಕ್ಯಾಬೀನ್ ನಲ್ಲಿ ಇಟ್ಟಿದ್ದ ಸಹೋದ್ಯೋಗಿಯ ಸ್ಕೂಟರ್ ಕೀ ಪಡೆದು ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ಬಾಪುತೋಟದ ಹೊಸ ಕಛೇರಿ ದಕ್ಕೆ ಬಳಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದ್ದು, ಪರಿಣಾಮ ಮುರುಗೇಸನ್ ಅವರು ಧಕ್ಕೆಯ ನೀರಿಗೆ ಬಿದ್ದು ಕಣ್ಮರೆಯಾಗಿದ್ದರು.
ಹುಡುಕಾಟ ನಡೆಸಲಾಯಿತಾದರೂ ಅವರು ಸಿಕ್ಕಿರಲಿಲ್ಲ. ಮಂಗಳವಾರ ಮುರುಗೇಸನ್ ರವರ ಮೃತ ದೇಹವು ಸಿವಾಕ್ ವೇ ನ ಹತ್ತಿರ ಪಾಪನಾಶಿನಿ ನದಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.