ನವದೆಹಲಿ : ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಹಾಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್.ಶರ್ಮಿಳಾ ಅವರು ಗುರುವಾರ ಕಾಂಗ್ರೆಸ್ ಸೇರಿದ್ದಾರೆ.
ವೈಎಸ್‌ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್.ಶರ್ಮಿಳಾ ಅವರು ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ರಾಹುಲ್ ಗಾಂಧಿ ಶರ್ಮಿಳ ಅವರಿಗೆ ಪಾರ್ಟಿಯ ಶಾಲನ್ನು ಹಾಕಿ ಪಾರ್ಟಿಗೆ ಬರಮಾಡಿಕೊಂಡರು.
ಶರ್ಮಿಳಾ ಅವರು ವೈಎಸ್‌ಆರ್ ತೆಲಂಗಾಣ ಪಕ್ಷದ ಸ್ಥಾಪಕಿಯಾಗಿದ್ದು, ಆಂಧ್ರಪ್ರದೇಶ ಮೂಲದ ಮಾನ್ಯತೆ ಪಡೆಯದ ಪ್ರಾದೇಶಿಕ ಪಕ್ಷವಾಗಿದೆ.
Advertisement. Scroll to continue reading.
ಜುಲೈ 2021 ರಲ್ಲಿ ಸ್ಥಾಪನೆಯಾದ ಅವರ ಪಕ್ಷವು ರಾಜ್ಯ ಅಥವಾ ಸಂಸತ್ತಿನಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳನ್ನು ಹೊಂದಿಲ್ಲ.
In this article:Andrapradesh, congress, Diksoochi news, mallikarjuna karge, rahul Gandhi, thelangana, y s sharmila
Click to comment