Connect with us

Hi, what are you looking for?

Diksoochi News

ಸಿನಿಮಾ

ಬಿಗ್ ಬಾಸ್ : ಮತ್ತೆ ಆಸ್ಪತ್ರೆ ಸೇರಿದ ಡ್ರೋನ್ ಪ್ರತಾಪ್

0

ಬಿಗ್ ಬಾಸ್ : ಕಳೆದ ಬಾರಿ ಸೋಪಿನ ನೀರು ಕಣ್ಣಿಗೆ ಬಿದ್ದ ಪರಿಣಾಮ ಆಸ್ಪತ್ರೆ ಸೇರಿದ್ದ ಡ್ರೋನ್ ಇದೀಗ ಮತ್ತೆ ಆಸ್ಪತ್ರೆ ಸೇರಿದ್ದಾರೆ ಎಂದು ವರದಿಯಾಗಿದೆ.

ಫುಡ್ ಪಾಯಿಸನ್ ಆಗಿದೆ ಎಂದು ಹೇಳಲಾಗುತ್ತಿದೆ.

Advertisement. Scroll to continue reading.

ಹಾಗಾಗಿ ಸಹಜವಾಗಿಯೇ ಡ್ರೋನ್ ಪ್ರತಾಪ್ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಪ್ರತಾಪ್ ಅವರಿಗೆ ಏನಾಗಿದೆ ಎಂದು ತಿಳಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ದಾರೆ.

ಡ್ರೋನ್ ಪ್ರತಾಪ್ ಅವರ ಟೀಮ್ ಹ್ಯಾಂಡಲ್ ಮಾಡುವಂತಹ ಸೋಷಿಯಲ್ ಮೀಡಿಯಾದಲ್ಲಿ ಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಹುಷಾರು ತಪ್ಪಿದ್ದಾರೆ. ಇನ್ನೂ ಸ್ವಲ್ಪ ಸಮಯದ ಒಳಗೆ ಬಿಗ್ ಬಾಸ್ ಮನೆಗೆ ನಿಮ್ಮ ಡ್ರೋನ್ ಪ್ರತಾಪ್ ಅವರು ತೆರಳಿದ್ದಾರೆ. ಅವರಿಗೆ ವೋಟ್ ಮಾಡಿ’ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದು ಸುಳ್ಳು, ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ. ಬದಲಿಗೆ ಅವರಿಗೆ ಫುಡ್ ಪಾಯಿಸನಿಂಗ್ ಆಗಿದೆ ಎಂದು ಹೇಳಲಾಗಿದೆ.

ಸದ್ಯ ಬಿಗ್ ಬಾಸ್ ಫಿನಾಲೆ ಹತ್ತಿರವಾಗುತ್ತಿದೆ. ಸ್ಪರ್ಧೆಯೂ ಕಠಿಣವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಪ್ರತಾಪ್ ಹವಾ ಜೋರಾಗೆ ಇದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!